ಮೈಸೂರು

ದಸರಾ ಹಿನ್ನೆಲೆ; ಅರಮನೆ ಆಡಳಿತ ಮಂಡಳಿಯ ಉದ್ಯೋಗಿಗಳಿಗಾಗಿ ಉಚಿತ ಆರೋಗ್ಯ ಶಿಬಿರ

ಮೈಸೂರಿನ ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆಯ ವತಿಯಿಂದ ಅರಮನೆ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ

ಮೈಸೂರು, ಸೆ. 24 :- ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ಪ್ರಯುಕ್ತ ಮೈಸೂರಿನ ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆಯು ಅರಮನೆ ಆಡಳಿತ ಮಂಡಳಿಯ ಉದ್ಯೋಗಿಗಳಿಗಾಗಿ ಶುಕ್ರವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಚಾಲನೆ ನೀಡಿದರು.

ಅರಮನೆ ಮಂಡಳಿಯ ಅಧಿಕಾರಿಗಳು, ಸಿಬ್ಬಂದಿಗಳು, ಭದ್ರತಾ ಸಿಬ್ವಂದಿಗಳು, ಸ್ವಚ್ಚತಾ ಸಿಬ್ವಂದಿಗಳು, ಗಾರ್ಡನ್ ನಿರ್ವಹಣೆ ಸಿಬ್ಬಂದಿಗಳು ಸೇರಿ ಸುಮಾರು 200 ಜನ ತಪಾಸಣೆ ಮಾಡಿಸಿಕೊಂಡರು.

ಅರಮನೆ ಮಂಡಳಿ ಉಪ ನಿರ್ದೇಶಕರಾದ ಟಿ. ಎಸ್. ಸುಬ್ರಮಣ್ಯ, ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆಯ ಮುಖ್ಯಸ್ಥರಾದ ಎ.ಆರ್.ಮಂಜುನಾಥ್, ಡಾ.ಸಿ.ಬಿ.ಅವಿನಾಶ್, ಡಾ.ಪಿ. ಶ್ರೀನಿವಾಸನ್, ಡಾ.ರಾಮಕೃಷ್ಣ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: