ಮೈಸೂರು

ರೋಟರಿ ಐವರಿ ಸಿಟಿ ವತಿಯಿಂದ ಯುವ ಸಾಧಕರಿಗೆ ಸನ್ಮಾನ

ಮೈಸೂರು,ಸೆ.25:- ರೋಟರಿ ಐವರಿ ಸಿಟಿ ವತಿಯಿಂದ ಇಬ್ಬರು ಅಸಾಧಾರಣ ಪ್ರತಿಭೆಯನ್ನು ಹೊಂದಿ ಸಾಧನೆಗೈದ ರೀಫಾ ತಸ್ಕಿನ್ ಹಾಗೂ ಪರಿಸರ ಕಾರ್ಯಕರ್ತ ಪಿ.ಎನ್.ಭರತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ರೀಫಾ ತಸ್ಕಿನ್ 11 ವರ್ಷ ವಯಸ್ಸಿನ ಇವರು ದ್ವಿಚಕ್ರ ವಾಹನಗಳು ಹಾಗೂ ಹತ್ತು ಚಕ್ರದ ಹೆವಿ ಡ್ಯೂಟಿ ಟ್ರಕ್ ಗಳವರೆಗೆ ಎಲ್ಲಾ ರೀತಿಯ ವಾಹನಗಳನ್ನು ಓಡಿಸುವ ಸಾಮರ್ಥ್ಯವನ್ನು ಹಾಗೂ ವಿಮಾನ ಹಾರಾಟ ಬಗ್ಗೆ ಅತಿ ಹೆಚ್ಚು ವಿಷಯ ಪರಿಣಿತಿಯನ್ನು ಹೊಂದಿದವರಾಗಿರುತ್ತಾರೆ.   ಪಿ.ಎನ್.ಭರತ್ ಅವರು ಪರಿಸರದ ಕಾರ್ಯಕರ್ತರು ಭಾರತದ ಅನೇಕ ಸ್ಥಳಗಳಿಗೆ ವಾಕಿಂಗ್ ಹಾಗೂ ಸೈಕ್ಲಿಂಗ್ ಮೂಲಕ ಪರಿಸರದ ಬಗ್ಗೆ ಜಾಗೃತಿ, ಅರಿವು ಮಾಹಿತಿಯನ್ನು ಹಂಚುತ್ತಿದ್ದಾರೆ. ಕಳೆದ ವರ್ಷ ಅವರು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ 04 ತಿಂಗಳುಗಳ ಅವಧಿಯಲ್ಲಿ ಕಾಲ್ನಡಿಗೆಯಲ್ಲಿ ಶ್ರಮಿಸಿದವರು ಅಷ್ಟೇಯಲ್ಲದೇ ಕಾಲ್ನಡಿಗೆಯ ಅವಧಿಯಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಸಸಿಗಳನ್ನು ವಿತರಿಸಿರುತ್ತಾರೆ.

ಈ ಸಂದರ್ಭ ರೋಟರಿ ಐವರಿ ಸಿಟಿ ಅಧ್ಯಕ್ಷರಾದ ಇಫ್ತಕರ್ ಅಹಮ್ಮದ್, ರೋಟೆರಿಯನ್ ಡಾ.ಕೆ.ವಿ.ರವಿಶಂಕರ್, ಎಂ.ಕೆ.ಮುಖೇಶ್, ರೋಟರಿ ಐವರಿ ಸಿಟಿ ಕಾರ್ಯದರ್ಶಿ ಲತಾ ಸಚ್ಚಿದಾನಂದ, ಶಬಾನ್ನಾ ಇಫ್ತಕರ್, ಶಕುಂತಲಾ ಬಾಬು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: