ಮೈಸೂರು

ಮಹಾಜನ ಕಾಲೇಜಿನಲ್ಲಿ ಎನ್.ಎಸ್.ಎಸ್. ಸಂಸ್ಥಾಪನಾ ದಿನಾಚರಣೆ

ಮೈಸೂರು,ಸೆ.25:- ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್. ಘಟಕದ ವತಿಯಿಂದ   ಎನ್.ಎಸ್.ಎಸ್. ಸ್ವಯಂ ಸೇವಕ ಸೇವಕಿಯರು ಶ್ರಮದಾನ ಮಾಡಿ ಮುಖ್ಯ ಗಣ್ಯರೊಂದಿಗೆ ಸಸಿಗಳನ್ನು ನೆಡುವುದರ ಮೂಲಕ 53ನೇ ಎನ್.ಎಸ್.ಎಸ್. ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಅವರು ಮಾತನಾಡಿ, ನಮ್ಮ ರಾಷ್ಟ್ರದ ಪ್ರಪ್ರಥಮ ಪ್ರಧಾನ ಮಂತ್ರಿಗಳಾದ ಜವಾಹರ್‍ಲಾಲ್ ನೆಹರೂ ಅವರು ದೇಶ ವಿಭಜನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಬಂದ ನಿರಾಶ್ರಿತರಿಗಾಗಿ ದೆಹಲಿಯಲ್ಲಿ ನಡೆಸಲಾಗುತ್ತಿದ್ದ ಶಿಬಿರಗಳನ್ನು ವೀಕ್ಷಿಸಿ ಯುವ ಜನರಲ್ಲಿ ಶಿಸ್ತು, ಸಂಘಟನೆ, ನಾಯಕತ್ವ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸುವ ಸಲುವಾಗಿ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಸೂಚಿಸುತ್ತಾರೆ. ಇದಕ್ಕೆ ಪೂರಕವಾಗಿ ನಿರ್ಮಾಣವಾದ ಯೋಜನಾಬದ್ಧವಾದ ಕಾರ್ಯಕ್ರಮವೇ ರಾಷ್ಟ್ರೀಯ ಸೇವಾ ಯೋಜನೆ ಎಂದು ತಿಳಿಸಿದರು.   ಇಂದಿನ ಯುವ ಪೀಳಿಗೆಯು ಕುಟುಂಬ, ಧರ್ಮ, ಭಾಷೆ, ಶಿಕ್ಷಣ ಹಾಗೂ ಸಾಮಾಜಿಕ ವ್ಯವಸ್ಥೆಗೆ ಧಕ್ಕೆಯಾಗದಂತೆ ಸಮಾಜಮುಖಿ ಕೆಲಸಗಳನ್ನು ಮಾಡಲು ಮುಂದಾಗುವಂತೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ   ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಸಿ.ಕೆ. ರೇಣುಕಾರ್ಯ, ಶೈಕ್ಷಣಿಕ ಸಲಹೆಗಾರರಾದ ಡಾ. ಎಸ್.ಆರ್. ರಮೇಶ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಆರ್. ತಿಮ್ಮೇಗೌಡ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಡಾ. ಜಿ. ದೊಡ್ಡರಸಯ್ಯ,   ಸಿದ್ದರಾಜು ಸಿ.ಎಸ್. ಮತ್ತು ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ಎನ್‍ಎಸ್‍ಎಸ್ ಘಟಕದ ಸ್ವಯಂಸೇವಕ ಸೇವಕಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವಯಂ ಸೇವಕ ರಾಜ್ಹಿಕ್‍ರಶೀದ್ ಸ್ವಾಗತಿಸಿದರು.ಡಾ. ದೊಡ್ಡರಸಯ್ಯ ಜಿ ಅವರು ವಂದಿಸಿದರು.    (ಜಿ.ಕೆ,ಎಸ್.ಎಚ್)

Leave a Reply

comments

Related Articles

error: