ದೇಶಪ್ರಮುಖ ಸುದ್ದಿ

ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 29616 ಕೊರೋನಾ ಸೋಂಕು ಪತ್ತೆ

ದೇಶ(ನವದೆಹಲಿ)ಸೆ.25:- ಭಾರತದಲ್ಲಿ ಕೊರೋನಾದ ಸಕ್ರಿಯ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ.   ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ  ಕಳೆದ 24 ಗಂಟೆಗಳಲ್ಲಿ 29616 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

290 ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಅದೇ ವೇಳೆ 28046 ಜನರು 24 ಗಂಟೆಗಳಲ್ಲಿ ಕೊರೋನದಿಂದ ಗುಣಮುಖರಾಗಿದ್ದಾರೆ. 4496 ಸಕ್ರಿಯ ಪ್ರಕರಣ  ಕಡಿಮೆ ಆಗಿದೆ. ಕೊರೋನಾ ಸಾಂಕ್ರಾಮಿಕದ ಆರಂಭದಿಂದಲೂ ಒಟ್ಟು ಮೂರು ಕೋಟಿ 36 ಲಕ್ಷ 24 ಸಾವಿರ ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 4 ಲಕ್ಷ 46 ಸಾವಿರದ 658 ಮಂದಿ ಸಾವನ್ನಪ್ಪಿದ್ದಾರೆ.   ಇಲ್ಲಿಯವರೆಗೆ 3 ಕೋಟಿ 28 ಲಕ್ಷ 76 ಸಾವಿರ ಜನರು ಗುಣಮುಖರಾಗಿದ್ದಾರೆ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಸುಮಾರು ಮೂರು ಲಕ್ಷ. ಒಟ್ಟು 3 ಲಕ್ಷದ 1 ಸಾವಿರ ಜನರು ಇನ್ನೂ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾದ ಒಟ್ಟು ಪ್ರಕರಣಗಳು – ಮೂರು ಕೋಟಿ 36 ಲಕ್ಷ 24 ಸಾವಿರದ 419, ಒಟ್ಟು ಗುಣಮುಖರಾದವರು – ಮೂರು ಕೋಟಿ 28 ಲಕ್ಷ 48 ಸಾವಿರದ 273,ಒಟ್ಟು ಸಕ್ರಿಯ ಪ್ರಕರಣಗಳು – 3 ಲಕ್ಷ 162,ಒಟ್ಟು ಸಾವು- ನಾಲ್ಕು ಲಕ್ಷ 46 ಸಾವಿರದ 368 ಒಟ್ಟು   84 ಕೋಟಿ 15 ಲಕ್ಷ 18 ಸಾವಿರ ಡೋಸ್ ಲಸಿಕೆ ನೀಡಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: