ಮೈಸೂರು

ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯ ಪ್ರಗತಿ; ಮತದಾರರ ಉಪಯೋಗಕ್ಕಾಗಿ ವಿಹೆಚ್ ಎ ಆ್ಯಪ್ ಬಿಡುಗಡೆ

ಮೈಸೂರು, ಸೆ.25 :- ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಅರ್ಹತಾ ದಿನಾಂಕ 01-12022 ಕ್ಕೆ ಸಂಬಂಧಿಸಿದಂತೆ  ವೇಳಾಪಟ್ಟಿಯನ್ನು ನಿಗದಿಪಡಿಸಿದ್ದು, ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯವು ಪ್ರಗತಿಯಲ್ಲಿದೆ. ಮತದಾರರ ಉಪಯೋಗಕ್ಕಾಗಿ ವಿಹೆಚ್ಎ (Voter Helpline App) ಆ್ಯಪ್ ಬಿಡುಗಡೆಯಾಗಿದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತ ಚುನಾವಣಾ ಆಯೋಗವು ಸಾರ್ವಜನಿಕರ ಉಪಯೋಗಕ್ಕಾಗಿ 18 ವರ್ಷ ಪೂರೈಸುವ ಹಾಗೂ ಮತದಾರರ ಪಟ್ಟಿಗಳಲ್ಲಿ ಈವರೆಗೂ ಹೆಸರನ್ನು ನೋಂದಾಯಿಸದೆ ಇರುವ ಮತದಾರರ ಹೆಸರುಗಳನ್ನು ಸೇರಿಸಲು, ತಮ್ಮ ಹೆಸರು ಸೇರ್ಪಡೆಯಾಗಿರುವ ಬಗ್ಗೆ ತಿಳಿದುಕೊಳ್ಳಲು, ತಿದ್ದುಪಡಿ, ಹಾಗೂ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಬಗ್ಗೆ ಹಾಗೂ ಮತಗಟ್ಟೆ ಕೇಂದ್ರಗಳ ಮಾಹಿತಿ, ಇತರೆ ಚುನಾವಣೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸುಲಭವಾಗಿ ತಿಳಿದುಕೊಳ್ಳಲು ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.

ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ VHA ಆಪ್  ಅನ್ನು ಪ್ಲೇ ಸ್ಟೋರ್ ಮುಖಾಂತರ  ಡೌನ್ ಲೋಡ್ ಮಾಡಿಕೊಂಡು  ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: