ಮೈಸೂರು

ಅರಮನೆಯಲ್ಲಿರುವ ಆನೆಗಳನ್ನು ಗುಜರಾತ್ ಗೆ ಶಿಫ್ಟ್ ಮಾಡುವುದೇ ದೊಡ್ಡ ಟಾಸ್ಕ್ : ಡಿಸಿಎಫ್ ಕರಿಕಾಳನ್

ಮೈಸೂರು,ಸೆ.25:- ಅರಮನೆಯಲ್ಲಿರುವ ಆನೆಗಳನ್ನು ಗುಜರಾತ್ ಗೆ ಕೊಂಡೊಯ್ಯುವುದೇ ದೊಡ್ಡ ಟಾಸ್ಕ್ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.

ಮೈಸೂರು ಅರಮನೆಯ ಆನೆಗಳನ್ನು ಗುಜರಾತ್ ಗೆ ಶಿಫ್ಟ್ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿ ನಮಗೆ ಈಗಾಗಲೇ ಗುಜರಾತ್ ನ ವೈಲ್ಡ್ ಲೈಫ್ ಮುಖ್ಯಸ್ಥರಿಂದ ಪತ್ರ ಬಂದಿದೆ. ಅವರ ಸೂಚನೆಯಂತೆ ಆರು ಆನೆಗಳ ಪೈಕಿ ನಾಲ್ಕು ಆನೆಗಳನ್ನು ಗುಜರಾತ್ ಗೆ ಕಳುಹಿಸಬೇಕಾಗಿದೆ. ಒಂದು ವಾರದಲ್ಲಿ ಆನೆಗಳ ಆರೋಗ್ಯ ತಪಾಸಣೆ ಮಾಡಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಆನೆಗಳ ವೈದ್ಯಕೀಯ ತಪಾಸಣೆ ನಡೆಸಿ ಒಂದು ವಾರದಲ್ಲಿ ವರದಿಯನ್ನು ಸಲ್ಲಿಸಲೇಬೇಕು ಎಂದು   ತಿಳಿಸಿದರು.

ವೈಲ್ಡ್ ಲೈಫ್ ಮುಖ್ಯಸ್ಥರ ನಿರ್ದೇಶನದ ಮೇರೆಗೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಗುಜರಾತ್ ಗೆ ಆನೆಗಳನ್ನು ಕೊಂಡೊಯ್ಯುವುದು ದೊಡ್ಡ ಟಾಸ್ಕ್ ಆಗಿದೆ. ಸುಮಾರು ಎರಡರಿಂದ ಮೂರು ಸಾವಿರ ಕಿಲೋಮೀಟರ್ ಪ್ರಯಾಣವೆಂದರೆ ಸಾಕಷ್ಟು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಲಿದೆ. ಅದರ ಪ್ರೊಸಿಜರ್ ಪ್ರಕಾರವೇ ಆನೆಗಳನ್ನು ಸಾಗಿಸಬೇಕಾಗತ್ತೆ. ಆನೆಗಳ ಆರೋಗ್ಯ, ಆಹಾರ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಾಗಣೆ ಮಾಡಲಾಗುವುದು ಎಂದು ತಿಳಿಸಿದರು.

ಅರಮನೆಯಲ್ಲಿ ಒಟ್ಟು ಆರು ಹೆಣ್ಣಾನೆಗಳಿವೆ. ಆರು ಹೆಣ್ಣಾನೆಯಲ್ಲಿ ನಾಲ್ಕನ್ನು ಶಿಫ್ಟ್ ಮಾಡಲಾಗುವುದು. ವೈದ್ಯಕೀಯ ತಪಾಸಣೆ ನಡೆಸಿ ವರದಿ ಕೊಡಲು ಹೇಳಿದ್ದಾರೆ. ಈಗ ವೈದ್ಯಕೀಯ ತಪಾಸಣೆ ಮಾಡುತ್ತಿದ್ದೇವೆ. ಒಂದು ವಾರದಲ್ಲಿ ವರದಿಯನ್ನು ಕಳಿಸುತ್ತೇವೆ. ಅವರು ಯಾವ ರೀತಿ ನಿರ್ದೇಶನ ನೀಡುತ್ತಾರೋ ಅದೇ ರೀತಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ ಪ್ರಕಾರವೇ ಎಲ್ಲವನ್ನೂ ಮಾಡಬೇಕಾಗಲಿದೆ. ಇಲ್ಲಿಂದ ಗುಜರಾತ್ ಗೆ ಆನೆಗಳು ಹೋಗಬೇಕೆಂದರೆ ಗುಜರಾತ್ ಸರ್ಕಾರ, ಅರಣ್ಯ ಇಲಾಖೆ ಅನುಮತಿ ಬೇಕು. ನಮ್ಮಿಂದಲೂ ಅನುಮತಿ ಬೇಕು. ಆ ವ್ಯವಸ್ಥೆಯನ್ನು ನಾವು ಮಾಡುತ್ತೇವೆ. ಆದರೆ ಆನೆಗಳನ್ನು ಕೊಂಡೊಯ್ಯುವುದೇ ದೊಡ್ಡ ಟಾಸ್ಕ್, ಎಷ್ಟು ಗಂಟೆ ಪ್ರಯಾಣ ಮಾಡಬೇಕು, ಆಹಾರ ಯಾವ ರೀತಿ ನೀಡಬೇಕು ಎಂಬುದನ್ನು ಪ್ರೊಸಿಜರ್ ಪ್ರಕಾರವೇ ನಡೆಸಲಾಗುವುದು ಎಂದರು.

Leave a Reply

comments

Related Articles

error: