ಕರ್ನಾಟಕಪ್ರಮುಖ ಸುದ್ದಿ

ಬಿಜೆಪಿ ಗೌರವಾನ್ವಿತ ಸದನವನ್ನು ಮದುವೆ ಛತ್ರದಂತೆ ಭಾವಿಸಿದೆ: ಕಾಂಗ್ರೆಸ್ ಕಿಡಿ

ಬೆಂಗಳೂರು,ಸೆ.25- ಬಿಜೆಪಿಯು ಗೌರವಾನ್ವಿತ ಸದನವನ್ನು ಮದುವೆ ಛತ್ರದಂತೆ ಭಾವಿಸಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಲೋಕಸಭೆಯ ಸಭಾಧ್ಯಕ್ಷ ಓಂ ಬಿರ್ಲಾ ಅವರು ರಾಜ್ಯದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮುಂದೆ ದಾರಿಹೋಕರನ್ನೂ ಸದನಕ್ಕೆ ಕರೆಸುವಿರಾ ಕಾಗೇರಿಯವರೆ ಎಂದು ಪ್ರಶ್ನಿಸಿದೆ.

ಬಿಜೆಪಿಯು ಗೌರವಾನ್ವಿತ ಸದನವನ್ನು ಮದುವೆ ಛತ್ರದಂತೆ ಭಾವಿಸಿದೆ! ನಿಯಮಗಳನ್ನ ಸದನ ಸದಸ್ಯರಲ್ಲದವರನ್ನ ಕರೆಸಿ ಭಾಷಣ ಮಾಡಿಸಿ ಯಾವ ಘನ ಕಾರ್ಯ ಸಾಧಿಸಿದೆ ಬಿಜೆಪಿ? ಹೀಗೆಯೇ ಬಿಟ್ಟರೆ ಸದನದಲ್ಲಿ ಮದುವೆ, ಮುಂಜಿಯಂತಹ ಸಮಾರಂಭಗಳನ್ನ ಮಾಡಲೂ ಬಿಜೆಪಿ ಹಿಂಜರಿಯುವುದಿಲ್ಲ! ಪ್ರಜಾಪ್ರಭುತ್ವದ ಘನತೆ ಅರಿಯದವರಿಂದ ಇನ್ನೇನು ನಿರೀಕ್ಷಿಸಲಾದೀತು ಎಂದು ಕಾಂಗ್ರೆಸ್ ಟೀಕಿಸಿದೆ.

ಸದನದ ಸದಸ್ಯರಲ್ಲದವರಿಗೆ ಪ್ರವೇಶವಿಲ್ಲದಿರುವಾಗ ಓಂ ಬಿರ್ಲಾರನ್ನ ಯಾವ ನಿಯಮಗಳ ಅಡಿಯಲ್ಲಿ ಕರೆಸಲಾಯಿತು? ಅವರ ಭದ್ರತಾ ಸಿಬ್ಬಂದಿಗೆ ಸದನದೊಳಗೆ ಪ್ರವೇಶಿಸಲು ಅನುಮತಿ ನೀಡಿದವರಾರು? ಚರ್ಚೆ ನಡೆಸಬೇಕಾದಲ್ಲಿ ಸಮಾರಂಭ ನಡೆಸಿದ್ದೇಕೆ? ನಿರೂಪಕರನ್ನು ಸದನದೊಳಗೆ ಕರೆತಂದಿದ್ದೇಕೆ? ಮುಂದೆ ದಾರಿಹೋಕರನ್ನೂ ಸದನಕ್ಕೆ ಕರೆಸುವಿರಾ ಕಾಗೇರಿಯವರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಹರಿಹಾಯ್ದಿದೆ.

ಅವಕಾಶ ಇಲ್ಲ: ಲೋಕಸಭೆಯ ಸಭಾಧ್ಯಕ್ಷರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಸ್ಪೀಕರ್‌ ಹೊಸ ಸಂಪ್ರದಾಯ ಹುಟ್ಟು ಹಾಕಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Leave a Reply

comments

Related Articles

error: