ಕರ್ನಾಟಕಪ್ರಮುಖ ಸುದ್ದಿ

ಮಲ್ಟಿಪ್ಲೆಕ್ಸ್ ಟಿಕೆಟ್ ದರ ಗರಿಷ್ಠ 200 ರೂ. ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯದಲ್ಲಿರುವ ಮಲ್ಟಿಪ್ಲೆಕ್ಸ್‍ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು ಗರಿಷ್ಠ 200 ರೂ. ನಿಗದಿ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017-18ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ರಾಜ್ಯದ ಮಲ್ಟಿಪ್ಲೆಕ್ಸ್’ಗಳು ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶ ದರ ನಿಗದಿ ಮಾಡುವ ಕುರಿತು ಪ್ರಕಟಿಸಿದ್ದರು. ಅದರಂತೆ ಈಗ ಆದೇಶ ಹೊರಡಿಸಿದ್ದು, ಗರಿಷ್ಠ ಪ್ರವೇಶ ದರವನ್ನು 200 ರೂ.ಗಳಿಗೆ ಮಿತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಯಾರಿಗೆಲ್ಲ ಅನ್ವಯ :

ಹೊಸ ನೀತಿಯಂತೆ ಕರ್ನಾಟಕದಲ್ಲಿ ಪ್ರದರ್ಶನಗೊಳ್ಳುವ ಯಾವುದೇ ಭಾಷೆಯ ಚಿತ್ರಗಳಿಗೆ ಗರಿಷ್ಠ ರೂ.200ಕ್ಕಿಂತ ಹೆಚ್ಚು ಟಿಕೆಟ್ ದರ ಪಡೆಯುವಂತಿಲ್ಲ. ಆದರೆ ಗೋಲ್ಡ್‍ ಕ್ಲಾಸ್ ಸ್ಕ್ರೀನ್ ಮತ್ತು ಗೋಲ್ಡ್‍ ಕ್ಲಾಸ್‍ ಸೀಟುಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಆದರೆ ಈ ಸೀಟುಗಳ ಸಂಖ್ಯೆ ಒಟ್ಟು ಸೀಟುಗಳ ಶೇ.10 ರಷ್ಟನ್ನು ಮೀರುವಂತಿಲ್ಲ. ಐಮ್ಯಾಕ್ಸ್ 4ಡಿಎಕ್ಸ್ ಚಿಂತ್ರಮಂದಿರಗಳಿಗೂ ಈ ಮಿತಿ ಅನ್ವಯಿಸುವುದಿಲ್ಲ.

(ಎನ್.ಬಿ.ಎನ್)

Leave a Reply

comments

Related Articles

error: