ಮೈಸೂರು

ಸಂಯುಕ್ತ ಕಿಸಾನ್ ಮೋರ್ಚಾ ರೈತ ಸಂಘ ಕರೆ ನೀಡಿದ ಭಾರತ್ ಬಂದ್ ಗೆ ಮೈಸೂರಿನಲ್ಲಿ ಎನ್ ಟಿ ಎಂ ಶಾಲೆ ಉಳಿಸಿ ಹೋರಾಟ ಸಮಿತಿ ಬೆಂಬಲ

ಮೈಸೂರು,ಸೆ.27:- ಸಂಯುಕ್ತ ಕಿಸಾನ್ ಮೋರ್ಚಾ ರೈತ ಸಂಘ ಇಂದು ಭಾರತ್ ಬಂದ್ ಗೆ ಕರೆ ನೀಡಿದ್ದು, ಮೈಸೂರಿನಲ್ಲಿಯೂ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿ, ಪ್ರತಿಭಟನೆ ರ್ಯಾಲಿ ನಡೆಸಿವೆ.

ಎನ್ ಟಿ ಎಂ ಶಾಲೆ ಉಳಿಸಿ ಹೋರಾಟ ಸಮಿತಿ ಕೂಡ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಹೋರಾಟ ನಡೆಸಿದೆ.   ಹೋರಾಟಗಾರ ಪ.ಮಲ್ಲೇಶ್ ಮಾತನಾಡಿ ಯಾವುದೇ ಗಲಾಟೆ ಇಲ್ಲದೆ, ಅವ್ಯವಸ್ಥೆ ಮಾಡದೆ  ನೀವು ನಿಮ್ಮ ಹೋರಾಟ ಮಾಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಅದರಂತೆ ಯಾವುದೇ ಗಲಾಟೆ ಇಲ್ಲದೆ ಹೋರಾಟ ಮಾಡುತ್ತೇವೆ ಎಂದರು.

ಲಕ್ಷಾಂತರ ಜನ ಹಗಲು ರಾತ್ರಿ ಹೋರಾಟ ಮಾಡುತ್ತಿದ್ದಾರೆ. ಒಂದು ದಿನ ಇಲ್ಲಿ ನಿಂತು ಹೋರಾಟ ಮಾಡಲು ಆಗಲ್ಲ ಅಂದರೆ ನಾವು ಮನುಷ್ಯರಾ? ಪ್ರತಿನಿತ್ಯದ ಆಹಾರ ವಸ್ತುಗಳನ್ನು ರೈತ ನಮಗೆ ಕೊಡುತ್ತಿದ್ದಾನೆ. ಅಕ್ಕಿ, ರಾಗಿ ತರಕಾರಿ ಎಲ್ಲ ಕೊಡುತ್ತಿದ್ದಾನೆ. ಅವನ ಬದುಕು ಅಲ್ಲಿ ಹಾಳಾಗಿದೆ.  ನಿಮಗ್ಯಾರಾದರೂ ಗೊತ್ತಿದೆಯಾ? 700ಮಂದಿ ಅಲ್ಲಿ ಸತ್ತಿದ್ದಾರೆ. ಪ್ರಧಾನಿ ಮೋದಿ ಒಂದು ದಿನವಾದರೂ ಬಂದು ಏನಾಯಿತು ಅಂತ ಕೇಳಿದರಾ? ಮೂರು ಕಾಯ್ದೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ ಅಂತ ಹೇಳಿದರೆ ಆ ಮನುಷ್ಯ ಕೇಳುತ್ತಲೇ ಇಲ್ಲ, ಹೀಗಿದ್ದಾಗ ಬೇರೆ ಏನಿದೆ ದಾರಿ? ರೈತ ಬೆಳೆಯದೇ ಇದ್ದರೆ ಏನು ಮಾಡುತ್ತೀರಿ, ಒಂದೇ ಒಂದು ದಿನ ಮೈಸೂರಿಗೆ ಹಾಲು ಬರದಿದ್ದರೆ ಏನು ಮಾಡುತ್ತೀರಿ, ಒಂದೇ ಒಂದು ದಿನ ಬೆಳಿಗ್ಗೆ ಹಾಲು ಬರದಿದ್ದರೆ ಕಾಫಿ, ಟೀ ಏನೂ ಇಲ್ಲ.  ನಮ್ಮ ಮಕ್ಕಳಿಗೆ ಹಾಲಿಲ್ಲ, ಒಂದು ದಿನ ನಾನು ಕರೆ ಕೊಡುತ್ತೇನೆ. ರೈತರು ಮೈಸೂರಿಗೆ ಯಾರೂ ಹಾಲು ತರಬೇಡಿ ಅಂತ ಆಗೇನು ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: