
ಮೈಸೂರು
ಭಗತ್ ಸಿಂಗ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸ್ಮರಣೆ
ಮೈಸೂರು,ಸೆ.27:- ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜನ್ಮ ಜಯಂತಿ ಅಂಗವಾಗಿ ಮುಡಾ ಸದಸ್ಯ ನವೀನ್ ಕುಮಾರ್ ಅವರು ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನ ವನದಲ್ಲಿರುವ ಭಗತ್ ಸಿಂಗ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಮರ್ಪಿಸಿದರು.
ಬಳಿಕ ಮಾತನಾಡಿದ ಅವರು ಶಹೀದ್ ಭಗತ್ ಸಿಂಗ್ ಅವರ ಹೆಸರು ಶೌರ್ಯ ಮತ್ತು ತ್ಯಾಗದ ಪ್ರತೀಕ. ಇವರ ಧೈರ್ಯ ಇಂದಿಗೂ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ. ಯುವಜನತೆ ಮನಸ್ಸಿನಲ್ಲಿ ಇಂದಿಗೂ ಅವರೊಬ್ಬ ಧೀಮಂತ ನಾಯಕ ಎಂದರು.
ಬಿಜೆಪಿ ನಗರ ಉಪಾಧ್ಯಕ್ಷರ ಹರ್ಷ ಮಾತನಾಡಿ ಸೆಪ್ಟೆಂಬರ್ 27, 1907ರಂದು ಲಾಯಲ್ಪುರ್ ಜಿಲ್ಲೆಯ ಜರಾನ್ ವಾಲಾ ತಾಲೂಕಿನಲ್ಲಿರುವ ಬಂಗಾ ಹಳ್ಳಿಯಲ್ಲಿ (ಈಗ ಪಾಕಿಸ್ತಾನದಲ್ಲಿದೆ) ಭಗತ್ ಸಿಂಗ್ ಅವರ ಜನನವಾಯಿತು. ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದ ಸಿಂಗ್ ಯುವ ಜನತೆಗೆ ಇಂದಿಗೂ ಕೂಡ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜೇಂದ್ರ, ಶ್ರೀನಿವಾಸ್, ವಿಘ್ನೇಶ್ವರ್ ಭಟ್, ಸುದರ್ಶನ್, ಮಂಜುನಾಥ್, ಮನು ,ಸನತ್ ,ನವೀನ್ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)