ಮೈಸೂರು

ರೈತರ ಭಾರತ ಬಂದ್ ಬೆಂಬಲಿಸಿ ಕರ್ನಾಟಕ ಸೇನಾಪಡೆ ಪ್ರತಿಭಟನೆ

ಮೈಸೂರು,ಸೆ.27:-   ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ, ದೇಶಾದ್ಯಂತ ರೈತ ಸಂಘಟನೆಗಳು ಕರೆಕೊಟ್ಟಿರುವ ಭಾರತ ಬಂದ್  ನ್ನು ಬೆಂಬಲಿಸಿ, ದೇಶದ ರೈತರಿಗೆ ನೈತಿಕ ಬೆಂಬಲವನ್ನು ನೀಡಿದ ಕರ್ನಾಟಕ ಸೇನಾಪಡೆ ವತಿಯಿಂದ ಇಂದು ಮೈಸೂರಿನ ಅಗ್ರಹಾರ ವೃತ್ತ ದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಮಾತನಾಡಿ ರೈತರ ಹಕ್ಕೊತ್ತಾಯದ ಶಾಂತಿಯುತ ಬಂದ್ ಗೆ ನಮ್ಮ ಬೆಂಬಲವಿದೆ. ಮೊದಲು ಸರ್ಕಾರ ರೈತರ ಸಮಸ್ಯೆಗಳನ್ನು ಆಲಿಸಿ, ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಅವರ ಬಾಳನ್ನು ಹಸನು ಮಾಡಬೇಕು. ರೈತನಿದ್ದರೆ ನಾವು. ಅವರು ಆಹಾರವನ್ನು ಬೆಳೆಯದಿದ್ದರೆ ನಮ್ಮ ಪಾಡೇನು?. ಕೊರೊನಾ ಸಾಂಕ್ರಾಮಿಕ ರೋಗದ ಸಂಕಷ್ಟ ಸಮಯದಲ್ಲಿ ನಾವೆಲ್ಲ ಮನೆಯಲ್ಲಿ ಕುಳಿತಿದ್ದರೆ, ರೈತರು ಮಾತ್ರ ಹೊಲ,ಗದ್ದೆಗಳಲ್ಲಿ ದುಡಿದು ಇಡೀ ದೇಶಕ್ಕೆ ಊಟ ನೀಡುತ್ತಿದ್ದರು. ದೇಶಕ್ಕೆ ರೈತರ ಕೊಡುಗೆ ಅಪಾರ . ರೈತ ದೇಶದ ಬೆನ್ನೆಲುಬು,  ಅವರಿಗೆ ನೋವಾಗದಂತೆ ಇಡೀ ದೇಶವೇ  ಅವರ ಜತೆ ನಿಲ್ಲಬೇಕು.   ಪ್ರಧಾನ ಮಂತ್ರಿಗಳು ರೈತರ ಎಲ್ಲಾ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ  ಜಿಲ್ಲಾಧ್ಯಕ್ಷ  ತೇಜೇಶ್ ಲೋಕೇಶ್ ಗೌಡ, ಡಾ ಶಾಂತರಾಜೇಅರಸ್ ಪಿ, ಡಾ ಮೊಗಣ್ಣಾಚಾರ್ ಎಂ, ವಿಜಯೇಂದ್ರ,  ಕುಮಾರ್ ಗೌಡ, ಚಂದ್ರ ಎಂ ಜೆ, ಮಂಜುನಾಥ್, ರಮೇಶ್ ಟಿ,  ಬಂಗಾರಪ್ಪ, ರಾಮನಾಯ್ಕ, ಗಣೇಶ್ ಪ್ರಸಾದ್, ಎಳನೀರು ರಾಮಣ್ಣ, ದರ್ಶನ್ ಗೌಡ, ರವಿ ನಾಯಕ್, ಮಲ್ಲೇಶ್, ಗುರಮಲ್ಲಪ್ಪ, ಬಸವರಾಜು, ಸುಬ್ಬೇಗೌಡ, ಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.

Leave a Reply

comments

Related Articles

error: