ಮೈಸೂರು

  ಕರ್ನಾಟಕ ರಾಜ್ಯಕ್ಕೆ ಗುಂಡುರಾವ್ ಅವರ ಕೊಡುಗೆ ಅಪಾರ : ಮಾಜಿ ಶಾಸಕ ಎಂ ಕೆ ಸೋಮಶೇಖರ್

ಮೈಸೂರು,ಸೆ.27:- ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ 84ನೇ ಜನ್ಮದಿನೋತ್ಸವದ ಅಂಗವಾಗಿ ಕರ್ನಾಟಕ ಕಲಾಮಂದಿರದ ಆವರಣದಲ್ಲಿ ಗುಂಡುರಾವ್ ಅವರ  ನೆನೆಪಿನಂಗಳ ಕಾರ್ಯಕ್ರಮವನ್ನು ಗುಂಡೂರಾವ್ ಅಭಿಮಾನಿಗಳ ಬಳಗದ ವತಿಯಿಂದ  ಆಚರಿಸಲಾಯಿತು.

ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಅವರು  ಪುಷ್ಪನಮನ ಸಲ್ಲಿಸಿ ಮಾತನಾಡಿ   ಕರ್ನಾಟಕ ರಾಜ್ಯಕ್ಕೆ ಗುಂಡೂರಾವ್ ಅವರ ಕೊಡುಗೆ ಅಪಾರ. ಬಡವರ್ಗದ ಮನೆಗಳವರಿಗೆ ಸರ್ಕಾರಿ ಕೆಲಸ ನೀಡುವ ಮೂಲಕ ಅವರ ಜೀವನದ ಆರ್ಥಿಕ ಪರಿಸ್ಥಿತಿ ನಂದಾದೀಪವಾಗಿ ಲಕ್ಷಾಂತರ ಮಂದಿ ಸ್ವಾಭಿಮಾನಿಯಾಗಿ ದುಡಿಯಲು ಪ್ರೇರೇಪಿಸಿದವರೇ ಗುಂಡುರಾವ್ ಅವರು. ಪೇ ಕಮಿಷನ್ ಜಾರಿಗೆ ತಂದರು.   ಕೇಂದ್ರ ರೈಲ್ವೆ ನಿಲ್ದಾಣದ ಪಕ್ಕದಲ್ಲೇ ನಗರ ಮತ್ತು ಗ್ರಾಮೀಣ ಬಸ್ ನಿಲ್ದಾಣ ಸ್ಥಾಪಿಸುವ ಸಾರಿಗೆ ಯೋಜನೆ ಏಷ್ಯಾದಲ್ಲೆ ಪ್ರಪ್ರಥಮ ಮಹತ್ವದ ಪಡೆಯಿತು. ಕುಗ್ರಾಮದಲ್ಲಿರುವ ಬಡವರಿಗೆ ಉಚಿತ ವಿದ್ಯುತ್ ಯೋಜನೆ, ಬೆಂಗಳೂರಿಗೆ ಕಾವೇರಿ ನೀರು ಸಮರ್ಪಕ ಪೂರೈಕೆ, ಸೇರಿದಂತೆ ಸಾಕಷ್ಟು ಜನಪರ ಯೋಜನೆಯನ್ನು ಮುಖ್ಯಮಂತ್ರಿಯಾಗಿ ಅನುಷ್ಠಾನಗೊಳಿಸಿದ್ದಾರೆ ಎಂದರು.

ಹಿರಿಯ  ಸಮಾಜ ಸೇವಕರಾದ ಡಾ. ಕೆ ರಘುರಾಂ ವಾಜಪೇಯಿ ಮಾತನಾಡಿ ಮೈಸೂರಿನ ಭವ್ಯವಾದ ಸಾಂಸ್ಕೃತಿಕ ಕಟ್ಟಡ ಕರ್ನಾಟಕ ಕಲಾಮಂದಿರ ನಮ್ಮ   ಹಿಂದಿನ  ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದ   ಆರ್ ಗುಂಡೂರಾವ್ ಅವರ ಕನಸಿನ ಕೂಸು.     ರಾಜ್ಯದ   ಸಂಸ್ಕೃತಿ ಚಿಂತನೆ  ಜನಮಾನಸದಲ್ಲಿ  ಮೈಗೂಡಿಸಿಕೊಳ್ಳಬೇಕೆಂಬ ಆಶಯ ಹೊಂದಿದ್ದರು.  ಅಂತಹ ಕೆಲವೇ ರಾಜ ಪ್ರಮುಖರಲ್ಲಿ ಕೃಷ್ಣದೇವರಾಯ,  ನಮ್ಮ ನಾಲ್ವಡಿ ಕೃಷ್ಣರಾಜ್ ಒಡೆಯರ್  ಇಂತಹ ಮನಸ್ಥಿತಿ ಹೊಂದಿದವರಾಗಿದ್ದರು. ಅದೇ ಸಾಲಿನಲ್ಲಿ ನಮ್ಮ   ಆರ್ ಗುಂಡೂ ರಾವ್ ಅವರು.  ಪ್ರತಿ ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಲ್ಲಿ ಸಾಂಸ್ಕೃತಿಕ ಭವನ ಗಳನ್ನು ಸರ್ಕಾರದ ವೆಚ್ಚದಲ್ಲೇ ನಿರ್ಮಿಸಿಕೊಡಬೇಕೆಂಬ ಆಶಯ ಹೊಂದಿದ್ದು, ಇಂತಹ  ಭವ್ಯವಾದ ಕಲಾ ಮಂದಿರಕ್ಕೆ ಬುನಾದಿ ಹಾಡಿದ್ದರು ಎಂದರು.

ಕನ್ನಡ ಸಂಸ್ಕೃತಿ ಇಲಾಖೆಯವರು ಆರ್ ಗುಂಡೂರಾವರ  ಆಳೆತ್ತರದ ಪ್ರತಿಮೆಯನ್ನು  ಮುಂಭಾಗದಲ್ಲಿ ಸ್ಥಾಪಿಸಿ,   ಭವ್ಯವಾದ  ಕಲಾಮಂದಿರಕ್ಕೆ ಆರ್ ಗುಂಡೂರಾವ್ ಕರ್ನಾಟಕ ಕಲಾಮಂದಿರ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ,ಕಾಂಗ್ರೆಸ್ ನಗರಾಧ್ಯಕ್ಷ ಆರ್ ಮೂರ್ತಿ , ಪ್ರಧಾನ ಕಾರ್ಯದರ್ಶಿ ಶಿವಣ್ಣ ,ನಗರ ಉಪಾಧ್ಯಕ್ಷ ರಾಜಾರಾಂ,ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಕೆ ಅಶೋಕ್ ,ಶಿವಮಲ್ಲು ,ಗುಂಡೂರಾವ್ ಅಭಿಮಾನಿ ಬಳಗದ ಅಧ್ಯಕ್ಷ ವಿನಯ್ ಕಣಗಾಲ್ ,ಸಿ ಎಸ್ ರಘು ,ಚಿಕ್ಕಣ್ಣ ,ಕೃಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್ ಕೆಂಪಿ ,ರಾಕೇಶ್ ಕುಂಚಿಟಿಗ ,ವೀಣಾ , ಚಕ್ರಪಾಣಿ  ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: