ಮೈಸೂರು

  ಪ್ರವಾಸಿಗರು ಪರಿಸರ ಸಂರಕ್ಷಣೆ ಮನೋಭವಾ ಬೆಳೆಸಿಕೊಳ್ಳಬೇಕಿದೆ : ಎಲ್ ಆರ್ ಮಹದೇವಸ್ವಾಮಿ

ಮೈಸೂರು,ಸೆ.27:- ವಿಶ್ವ ಪ್ರವಾಸಿಗರ ದಿನಾಚರಣೆ ಅಂಗವಾಗಿ  ಮೈಸೂರು ಮೃಗಾಲಯ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರಿಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ಮತ್ತು ಅಪೂರ್ವ ಸ್ನೇಹ ಬಳಗದ ವತಿಯಿಂದ ಮೃಗಾಲಯ ಮುಂಭಾಗ  ಮೈಸೂರು ಪಾಕ್ ಹಾಗೂ ಗುಲಾಬಿ ಹೂವನ್ನು ನೀಡಿ ಸ್ವಾಗತಿಸಿ, ಶುಭ ಕೋರಲಾಯಿತು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎಲ್.ಆರ್ ಮಹದೇವಸ್ವಾಮಿ ಮಾತನಾಡಿ  ಪ್ರವಾಸೋದ್ಯಮಕ್ಕೆ  ಅದ್ಭುತ ಅವಕಾಶಗಳು ಇಲ್ಲಿವೆ. ಮೈಸೂರು ದಕ್ಷಿಣ ಭಾರತದ ಪ್ರಮುಖ ಕೇಂದ್ರವಾಗಿದೆ ಎಂದರು.

ಪ್ರವಾಸಿ ತಾಣಗಳಿಗೆ ಹೋಗುವ ಪ್ರವಾಸಿಗರು ಪರಿಸರ ಸಂರಕ್ಷಣಾ ಮನೋಭವಾ ಬೆಳೆಸಿಕೊಳ್ಳಬೇಕಿದೆ. ಮೈಸೂರು ಪ್ರವಾಸಿ ತಾಣಗಳ ಅಭಿವೃದ್ಧಿ ಪರಿಸರಕ್ಕೆ ಪೂರಕವಾಗಿದೆ. ಕೆಲವು ಖಾಸಗಿ ವಲಯಗಳಲ್ಲಿ ಹಲವು ಕಡೆ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವ ಹಿನ್ನೆಲೆಯಲ್ಲಿ ಮಾನವ ನಿರ್ಮಿತ ಕಟ್ಟಡಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಪ್ರಾಕೃತಿಕ ಆಕರ್ಷಣೆ ಕಳೆದು ಹೋಗಬಾರದು ಎಂದು ಎಚ್ಚರಿಸಿದರು.

ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಎಸ್.ಇ ಗಿರೀಶ್,  ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್  ಸದಸ್ಯರಾದ ಜ್ಯೋತಿ ರೇಚಣ್ಣ , ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಲಕ್ಷ್ಮೀದೇವಿ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಾಜ್ಯ ಅಭಿವೃದ್ಧಿ ನಿಗಮ ನಿರ್ದೇಶಕ ರೇಣುಕರಾಜ ,  ರವಿಶಂಕರ್ ,ಅಜಯ್ ಶಾಸ್ತ್ರಿ ,ರಾಕೇಶ್ ಕುಂಚಿಟಿಗ ,  ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: