ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಅಕ್ಟೋಬರ್ ತಿಂಗಳಿನಲ್ಲಿ ತೆರೆ ಕಾಣಲಿದೆ ಕೋಟಿಗೊಬ್ಬ-3,ಸಲಗ,ಭಜರಂಗಿ 2 ರಿಲೀಸ್

ರಾಜ್ಯ(ಬೆಂಗಳೂರು)ಸೆ.27:- ಕೊರೋನಾದಿಂದ ಮುಚ್ಚಿದ್ದ ಚಿತ್ರಮಂದಿರಗಳು ತೆರೆದುಕೊಂಡಿದ್ದು, ಅ.1ರಿಂದ ನೂರಕ್ಕೆ ನೂರರಷ್ಟು ಮಂದಿಗೆ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಕನ್ನಡ ಚಿತ್ರರಂಗದ ಇತ್ತೀಚಿನ ಬಹುನಿರೀಕ್ಷಿತ ಚಿತ್ರಗಳಾದ ಭಜರಂಗಿ2, ಕೋಟಿಗೊಬ್ಬ3 ಮತ್ತು ಸಲಗ ಅಕ್ಟೋಬರ್ ತಿಂಗಳಲ್ಲಿ ತೆರೆ ಕಾಣಲಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ3 ಮತ್ತು ದುನಿಯಾ ವಿಜಯ್ ಅವರ ಸಲಗ ಅಕ್ಟೋಬರ್ 14ರಂದು ಬಿಡುಗಡೆಯಾಗುತ್ತಿರುವುದು ಈ ಸಿನಿಮಾಗಳ ಕುರಿತು ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ಭಜರಂಗಿ2 ಅಕ್ಟೋಬರ್ 29ರಂದು ತೆರೆ ಕಾಣುತ್ತಿದೆ. ನಾಗಶೇಖರ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಅಭಿನಯದ “ಶ್ರೀಕೃಷ್ಣ @ ಜಿಮೇಲ್ ಡಾಟ್ ಕಾಂ” ಸಿನಿಮಾ ಅಕ್ಟೋಬರ್ 15ರಂದು ಬಿಡುಗಡೆಯಾಗುತ್ತಿದ್ದರೆ, ಸೂರಜ್ ಗೌಡ ಅವರ ಮೊದಲ ನಿರ್ದೇಶನದ ಚಿತ್ರ ‘ನಿನ್ನಾ ಸನಿಹಕೆ’ ಅಕ್ಟೋಬರ್ 8ರಂದು ತೆರೆ ಕಾಣಲಿದೆ.

Leave a Reply

comments

Related Articles

error: