ಮೈಸೂರು

ಭಾರತ ಬಂದ್ ಗೆ ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಬೆಂಬಲ

ಮೈಸೂರು,ಸೆ.27:- ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ, ದೇಶಾದ್ಯಂತ ರೈತ ಸಂಘಟನೆಗಳು ಕರೆಕೊಟ್ಟಿರುವ ಭಾರತ ಬಂದ್ ಅನ್ನು ಬೆಂಬಲಿಸಿ, ದೇಶದ ರೈತರಿಗೆ ನೈತಿಕ ಬೆಂಬಲವನ್ನು ನಮ್ಮ ನಗರ ಕಾಂಗ್ರೆಸ್ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರ ಅಧ್ಯಕ್ಷರಾದ ಆರ್ ಮೂರ್ತಿ ಹಾಗೂ ಜಿಲ್ಲಾ ಅಧ್ಯಕ್ಷರಾದ ಡಾ. ಬಿ ಜೆ ವಿಜಯ್ ಕುಮಾರ್ ಅವರ ನೇತೃತ್ವದಲ್ಲಿ ಇಂದು ಮೈಸೂರಿನ ರೈಲ್ವೆ ನಿಲ್ದಾಣ ಮುಂಭಾಗ ಡಾ. ಬಾಬು ಜಗಜೀವನ್ ರಾವ್ ಪ್ರತಿಮೆಯ ಮುಂದೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು.

ರೈತರ ಹಕ್ಕೊತ್ತಾಯದ ಶಾಂತಿಯುತ ಬಂದ್ ಗೆ ನಮ್ಮ ಬೆಂಬಲವಿದೆ. ಮೊದಲು ಸರ್ಕಾರ ರೈತರ ಸಮಸ್ಯೆಗಳನ್ನು ಆಲಿಸಿ, ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಅವರ ಬಾಳನ್ನು ಹಸನು ಮಾಡಬೇಕು. ಮಾನ್ಯ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಹೇಳಿದಂತೆ ನಾವು ಹೇಳುವುದು ಮೊದಲು ಜೈ ಕಿಸಾನ್, ಜೈ ಜವಾನ್. ರೈತನಿದ್ದರೆ ನಾವು. ಅವರು ಆಹಾರವನ್ನು ಬೆಳೆಯದಿದ್ದರೆ ನಮ್ಮ ಪಾಡೇನು?. ಕೊರೊನಾ ಸಾಂಕ್ರಾಮಿಕ ರೋಗದ ಸಂಕಷ್ಟ ಸಮಯದಲ್ಲಿ ನಾವೆಲ್ಲ ಮನೆಯಲ್ಲಿ ಕುಳಿತಿದ್ದರೆ, ರೈತರು ಮಾತ್ರ ಹೊಲ,ಗದ್ದೆಗಳಲ್ಲಿ ದುಡಿದು ಇಡೀ ದೇಶಕ್ಕೆ ಊಟ ನೀಡುತ್ತಿದ್ದರು. ದೇಶಕ್ಕೆ ರೈತರ ಕೊಡುಗೆ ಅಪಾರ . ರೈತ ದೇಶದ ಬೆನ್ನೆಲುಬು, ಅವರಿಗೆ ನೋವಾಗದಂತೆ ಇಡೀ ದೇಶವೇ ಅವರ ಜತೆ ನಿಲ್ಲಬೇಕು. ಮಾನ್ಯ ಪ್ರಧಾನ ಮಂತ್ರಿಗಳು ರೈತರ ಎಲ್ಲಾ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ ರೈಲ್ವೆ ನಿಲ್ದಾಣ ಮುಂಭಾಗ ಡಾ. ಬಾಬು ಜಗಜೀವನ್ ರಾವ್ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮೈಸೂರು ಗ್ರಾಮಾಂತರ ಉಪಾಧ್ಯಕ್ಷರಾದ ಪ್ರೊ. ಶಿವಕುಮಾರ್, ಪಿ ವೆಂಕಟರಾಮ್, ಹೆಡತಲೆ ಮಂಜುನಾಥ್ ಪ್ರಧಾನ ಕಾರ್ಯದರ್ಶಿಯಾದ ಶಿವಪ್ರಸಾದ್ ನಗರ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಕಾಂಗ್ರೆಸ್ ಪದಾಧಿಕಾರಿಗಳಾದ ಶ್ರೀನಾಥ್ ಬಾಬು, ಈಶ್ವರ್ ಚಕಡಿ, ಗಿರೀಶ್, ಉತ್ತರಹಳ್ಳಿ ಶಿವಣ್ಣ, ರೋಹಿತ್, ಡೈರಿ ವೆಂಕಟೇಶ್, ನವೀನ್, ರಫೀಕ್, ಮಾಜಿ ಮೇಯರ್ ಚಿಕ್ಕಣ್ಣ, ಮಾಧ್ಯಮ ವಕ್ತಾರರಾದ ಮಹೇಶ್, ಶಿವಮಲ್ಲು, ಎನ್ನಾರೆನ್ ಮಂಜು, ಬಸುರಾಜ್, ಟಿಪಿ ಯೋಗೇಶ್, ರಾಜೇಶ್, ರಮೇಶ್, ಸಿದ್ದರಾಜು, ಶ್ರೀಧರ್ ಗೌಡ, ಚಂದನ್ ಗೌಡ,ಲೋಕ ನಾಥ್ ಗೌಡ, ಟಿ ನರಸೀಪುರ ಪುರಸಭಾ ಮಾಜಿ ಅಧ್ಯಕ್ಷರಾದ ಹೇಳವರು ಉಂಡಿ ಸೋಮು,
ಪುಟ್ಟಸ್ವಾಮಿ, ಹೇಮಂತ್,ದೊರೆ ರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುನಂದ ಕುಮಾರ್, ಗುರುಸ್ವಾಮಿ, ಸತೀಶ್ ಕುಮಾರ್, ಬ್ರಾಡ್ವೇ ಕಿರಣ್, ವಕೀಲರಾದ ಪ್ರೇಮ್ ಹಾಗೂ ಮಹೇಶ್ ಹಾಗೂ ಇತರ ಪದಾಧಿಕಾರಿಗಳು  ಪಾಲ್ಗೊಂಡಿದ್ದರು.

Leave a Reply

comments

Related Articles

error: