ಕರ್ನಾಟಕಪ್ರಮುಖ ಸುದ್ದಿ

ಬ್ರಿಟಿಷರಿಗೆ ಕ್ಷಮಾಪಣೆ ಬರೆದುಕೊಟ್ಟು ಶರಣಾಗಿದ್ದು, ನಿಮ್ಮ ಪರಿವಾರದ ಸಾವರ್ಕರ್ ಎಂಬ ಇತಿಹಾಸ ತಿಳಿದಿರಲಿ: ಸಿಎಂಗೆ ಸಿದ್ದು ತಿರುಗೇಟು

`ಕಾಂಗ್ರೆಸ್ ಗುಲಾಮಗಿರಿ ಪಕ್ಷ’ ಸಿಎಂ ಹೇಳಿಕೆಗೆ ಎರಡು ಪಕ್ಷದ ನಾಯಕರ ನಡುವೆ ವಾಕ್ಸಮರ

ಬೆಂಗಳೂರು,ಸೆ.28-`ಕಾಂಗ್ರೆಸ್ ಗುಲಾಮಗಿರಿ ಪಕ್ಷ’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ವಾಕ್ಸಮರಕ್ಕೆ ಕಾರಣವಾಗಿದೆ.

ಸಿಎಂ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬ್ರಿಟಿಷರ ಗುಲಾಮಗಿರಿ ವಿರುದ್ಧ ಹೋರಾಡಿ ಜೈಲು ಸೇರಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ನಾಯಕರು ಎಂದಿದ್ದಾರೆ.

ಅಲ್ಲದೆ, ಬ್ರಿಟಿಷರಿಗೆ ಕ್ಷಮಾಪಣೆ ಬರೆದುಕೊಟ್ಟು ಶರಣಾಗಿದ್ದು, ನಿಮ್ಮ ಪರಿವಾರದ ಸಾವರ್ಕರ್ ಮತ್ತು ದೇಶ ಭಕ್ತರು ಎನ್ನುವ ಇತಿಹಾಸವು ಕರ್ನಾಟಕ ಮುಖ್ಯಮಂತ್ರಿಗಳಿಗೆ ತಿಳಿದಿರಲಿ ಎಂದು ಟಾಂಗ್ ಕೊಟ್ಟು ಟ್ವೀಟ್ ಮಾಡಿದ್ದಾರೆ.

ಇನ್ನು ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಹೌದು ಸಾರ್, ಬ್ರಿಟಿಷರ ವಿರುದ್ಧ ಹುಲ್ಲು ಕಡ್ಡಿಯನ್ನೂ ಎತ್ತದೆ ಕಾಂಗ್ರೆಸ್ಸಿಗರು ಸ್ವಾತಂತ್ರ್ಯ ತಂದುಕೊಟ್ಟರು. ಧಿಂಗ್ರಾ, ಭಗತ್ ಸಿಂಗ್, ಬೋಸ್ ಬ್ರಿಟಿಷರ ಜೊತೆ ಗೋಲಿ, ಬುಗುರಿ, ಆಡುತ್ತಿದ್ದರು. ಮುಂದೊಂದು ದಿನ ಇಂಥ ಬೊಗಳೆ ಬಿಡುತ್ತೀರಿ ಅಂಥ ಗೊತ್ತಿದ್ದೇ, ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ಸನ್ನು ವಿಸರ್ಜನೆ ಮಾಡಬೇಕೆಂದು ಗಾಂಧೀಜಿ ಹೇಳಿದ್ದು! ಎಂದು ಕಿಡಿಕಾರಿದ್ದಾರೆ. (ಎಂ.ಎನ್)

Leave a Reply

comments

Related Articles

error: