ಸುದ್ದಿ ಸಂಕ್ಷಿಪ್ತ

ನೂತನ ಪದಾಧಿಕಾರಿಗಳ ಪದಗ್ರಹಣ : ಮೇ 4 ರಂದು

ಮೈಸೂರಿನ ಕಾನ್ಫಿಡರೇಷನ್ ಆಫ್ ರಿಯಲ್ ಏಸ್ಟೇಟ್ ಡೆವಲ್ಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ 2017-19ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ಮೇ 4 ರಂದು ಸಂಜೆ 6.30ಕ್ಕೆ ಹೋಟೆಲ್ ರಾಡಿಸನ್ ನಲ್ಲಿ ಆಯೋಜಿಸಲಾಗಿದೆ.

ವಸತಿ ಸಚಿವ ಎಂ.ಕೃಷ್ಣಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್, ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಡಾ.ಗೀತಾ ಮಹದೇವ ಪ್ರಸಾದ್, ಸಂಸ್ಥೆಯ ಅಧ್ಯಕ್ಷ ಡಾ.ವಿ.ಕೆ.ಜಗದೀಶ್ ಬಾಬು, ಮುಖ್ಯಸ್ಥ ಬಾಲಕೃಷ್ಣ ಹೆಗಡೆ ಉಪಸ್ಥಿತರಿದ್ದು ಪ್ರಮಾಣ ವಚನ ಬೋಧಿಸಲಿದ್ದಾರೆ.(ಕೆ.ಎಂ.ಆರ್. ಎಲ್.ಜಿ)

Leave a Reply

comments

Related Articles

error: