ಮೈಸೂರು

ವಿಶ್ವ ಹೃದಯ ದಿನಾಚರಣೆ : ಸನ್ಮಾನ

ಮೈಸೂರು, ಸೆ.29:- ವಿಶ್ವ ಹೃದಯ ದಿನಾಚರಣೆ ಅಂಗವಾಗಿ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ  ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ನುರಿತ ಹೃದಯ ತಜ್ಞರನ್ನು  ಸನ್ಮಾನಿಸಿ ಅಭಿನಂದಿಸಲಾಯಿತು.

ಮೈಸೂರಿನ ನುರಿತ ಹೃದಯ ವೈದ್ಯ ತಜ್ಞರಾದ ಸುಯೋಗ್ ಆಸ್ಪತ್ರೆಯ ಡಾ. ಎಸ್ ಪಿ ಯೋಗಣ್ಣ ,ನಾರಾಯಣ ಹೃದಯಾಲಯದ ಡಾ. ರವಿ ,ಡಾ. ರಾಜೇಂದ್ರ , ಡಾ.ಅಹ್ಮದ್  ಅವರನ್ನು ಸನ್ಮಾನಿಸಲಾಯಿತು.

ಮೂಡಾ ಅಧ್ಯಕ್ಷರಾದ ಹೆಚ್.ವಿ‌ ರಾಜೀವ್  ಮಾತನಾಡಿ ಸಮಾಜದಲ್ಲಿ ಮನುಷ್ಯನ ಜೀವನಕ್ರಮದ ಒತ್ತಡದಿಂದ ಮತ್ತು ಆಹಾರಪದ್ದತಿಯ ಬದಲಾವಣೆಯಿಂದ ಆರೋಗ್ಯ ಹದಗೆಡುತ್ತಿದೆ. ಆದರೆ ಅವೆಲ್ಲಕ್ಕೂ ನಿರಂತರ ದೈಹಿಕ ಚಟುವಟಿಕೆ ಮತ್ತು ವ್ಯದ್ಯರ ಸಲಹೆ ಮತ್ತು ಆರೋಗ್ಯ ತಪಾಸಣೆಯಿಂದ ಹೃದಯ ಸಮತೋಲನ ಉತ್ತಮವಾಗಿ ಕಾಪಾಡಿಕೊಳ್ಳಬಹುದಾಗಿದೆ, ಮೋದಿ ಅವರ ಕಲ್ಪನೆಯಂತೆ ಬಡವರ್ಗಕ್ಕೆ ಆರೋಗ್ಯ ವಿಷಯದಲ್ಲಿ ಸಹಕಾರವಾಗುಂತೆ ಭಾರತದಲ್ಲಿ ಆಯುಷ್ಮಾನ್ ಭಾರತ್ ಕೋಟ್ಯಾಂತರ ಬಡವರ್ಗದ ಕುಟುಂಬಕ್ಕೆ ಆಸರೆಯಾಗಿದೆ, ಕಡುಬಡ ವರ್ಗ ಮತ್ತು ಶ್ರಿಮಂತರ ಮಧ್ಯವಿರುವ ಮಧ್ಯಮವರ್ಗದವರಿಗೂ ಸಹಆರೋಗ್ಯ ವಿಷಯದಲ್ಲಿ ಸಹಕಾರವಾಗುವಂತೆ ಯೋಜನೆ ಕಾರ್ಯರೂಪಕ್ಕೆ ಬರಬೇಕಿದೆ ಎಂದರು.

ಬಿಜೆಪಿ ನಗರಾಧ್ಯಕ್ಷರಾದ‌ ಟಿಎಸ್. ಶ್ರೀವತ್ಸ  ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯ ಸಂಪಾದನೆಗೆ ಒತ್ತು ನೀಡುತ್ತಿದ್ದು ತನ್ನ ಆರೋಗ್ಯ ಕಾಪಾಡಿಕೊಳ್ಳುವ ಕಡೆ ಮೈ ಮರೆಯುತ್ತಿದ್ದಾನೆ, ಆರೋಗ್ಯವಂತನೇ ನಿಜವಾದ ಶ್ರೀಮಂತ ಎನ್ಮುವುದನ್ನು ಕೊರೋನಾ ಎಲ್ಲರಿಗೂ ತೊರಿಸಿಕೊಟ್ಟಿದೆ, ಹೃದಯಕ್ಕೆ ಹಾನಿಯಾಗುವ ವಿಷಯಕ್ಕೆ ಸಂಬಂಧಿಸಿದ ತೊಂದರೆಗಳ ಬಗ್ಗೆ ಮೊದಲ ಹಂತದಲ್ಲೆ ಜಾಗೃತರಾದರೇ ಒಳ್ಳೆಯದು ಎಂದರು.

ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಎಸ್.ಪಿ ಯೋಗಣ್ಣ  ಖಾಸಗಿ ಆಸ್ಪತ್ರೆಗಳು ದುಬಾರಿ ಎಂದು ಕೆಲವರಲ್ಲಿ ತಪ್ಪು ಕಲ್ಪನೆಯಿದೆ ಆದರೆ ಕಾನೂನು ಪ್ರಕಾರ ರೋಗಿಯ ದಾಖಲಾತಿಗೂ ಮುನ್ನ ಕೆಲವು ತಪಾಸಣೆಗಳು ಕಡ್ಡಾಯ ಆಧುನಿಕ ಯಂತ್ರೋಪಕರಣಗಳ ನಿರ್ವಹಣೆ ಮತ್ತು ಸರ್ಕಾರದ ದರದ ಶುಲ್ಕದ ಅನುಸಾರ ನಿಗದಿಪಡಿಸಲಾಗಿರುತ್ತದೆ . ಎಲ್ಲಾ ತಪಾಸಣೆಗಳನ್ನು ಮಾಡುವದರಿಂದ ಪ್ರಾಥ ಮಿಕ ರೋಗಲಕ್ಷಣವನ್ನ ಪತ್ತೆಹಿಡಿದು ಗುಣಪಡಿಸಿಕೊಳ್ಳಬಹುದಾಗಿದೆ ಎಂದರು.

ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ,ನಗರಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್ ,
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಮುತ್ತಣ್ಣ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯೆ ಲಕ್ಷ್ಮಿದೇವಿ ,ಮೈಸೂರು ಮಹಾನಗರ ಪಾಲಿಕೆ ನಾಮ ನಿರ್ದೇಶಕ ಕೆಜೆ ರಮೇಶ್ ,ಜೋಗಿ ಮಂಜು ,
ಕೆಂಪೇಗೌಡರ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ್ ಗೌಡ ,ಅಪೂರ್ವ ಸುರೇಶ್ ,ಮಹೇಂದ್ರ ಎಂ ಶೈವ ,ನವೀನ್ ಕೆಂಪಿ ,ಸದಾಶಿವ್ ,ಸೂರಜ್, ಗಣೇಶ್  ಇನ್ನಿತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: