ಮೈಸೂರು

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ಮೈಸೂರು,ಸೆ.30:- ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬೆಲೆಗಳನ್ನು ಕೂಡಲೇ ಇಳಿಸಬೇಕೆಂದು ಒತ್ತಾಯಿಸಿ  ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸರ್ಕಾರವು ಪೆಟ್ರೋಲ್-ಡೀಸೆಲ್ ಬೆಲೆಯನ್ನು ಏರಿಸುತ್ತಲೇ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ 77ಡಾಲರ್ ಗಳಷ್ಟು ಇರುವಾಗ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಹಾಗೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯೂ ಈ ಅವಧಿಯಲ್ಲಿ 150ರೂ.ಗಳಿದ್ದದ್ದು 1000ರೂ.ಗಳ ಗಡಿ ಸಮೀಪಿಸಿದೆ. ಅಡುಗೆ ಅನಿಲಕ್ಕೆ ನೀಡಲಾಗುತ್ತಿದ್ದ ಸಹಾಯಧನ ಬಹುತೇಕ ನೀಡದೆ ಸತಾಯಿಸಲಾಗುತ್ತಿದೆ. ಪೆಟ್ರೋಲ್/ಡೀಸೆಲ್ ಬೆಲೆಗಳ ಏರಿಕೆಯ ಕಾರಣದಿಂದ ಸಾರಿಗೆ ವೆಚ್ಚವು ದ್ವಿಗುಣಗೊಳ್ಳುತ್ತಿದೆ. ಬಸ್ ದರಗಳು ಶೇ.20ರಷ್ಟು ಹೆಚ್ಚಳಗೊಂಡಿದೆ. ಇದು ಮತ್ತಷ್ಟು ಹೆಚ್ಚಳಗೊಳ್ಳುವ ಸಾಧ್ಯತೆ ಇದೆ.  ಈ ಕೂಡಲೇ ಏರಿಕೆಯಾದ ಬೆಲೆಗಳನ್ನು ಇಳಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ, ಜಿಲ್ಲಾ ಸಂಘಟನಾ ಸಂಚಾಲಕ ರಾಜಣ್ಣ ಇಟ್ನಾ, ಹನುಮಂತು ಬೆಲವೆತ್ತ, ಸುರೇಶ್ ಯರಗನಹಳ್ಳಿ, ಗೋವಿಂದರಾಜು ಜೆ.ಪಿ ನಗರ, ಪುಟ್ಟಸ್ವಾಮಿ, ಮರಿಸ್ವಾಮಿ, ಕುಮಾರ್, ರಂಗನಾಥ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: