ಕರ್ನಾಟಕಪ್ರಮುಖ ಸುದ್ದಿಮೈಸೂರು

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲೇ ಸಂಪೂರ್ಣ ಲಸಿಕೆ ಪಡೆದ ಮೊದಲ ಕ್ಷೇತ್ರ : ಸಚಿವ ಡಾ.ಕೆ.ಸುಧಾಕರ್ ಘೋಷಣೆ

ಮೈಸೂರು, ಸೆ.30:- ಇಡೀ ರಾಜ್ಯ ದಲ್ಲಿಯೇ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಸಂಪೂರ್ಣ ಲಸಿಕೆ ಪಡೆದ ಮೊದಲ ಕ್ಷೇತ್ರವೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಘೋಷಿಸಿದರು.
ಮೋದಿ ಯುಗ ಉತ್ಸವ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮೊದಲನೇ ಅಲೆಯಲ್ಲಿ ನಮ್ಮ ದೇಶ ಸಹಾಯ ಮಾಡಿದ ಕಾರಣಕ್ಕಾಗಿ ಎರಡನೇ ಅಲೆಯಲ್ಲಿ ದೊಡ್ಡ ಪ್ರಮಾಣದ ಆಮ್ಲಜನಕ ಸಹಕಾರ ಬೇರೆ ದೇಶಗಳಿಂದ ಸಿಕ್ಕಿತು. ರಾಜ್ಯದಲ್ಲಿ ಶೇ.80ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. 5ಕೋಟಿ 60ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ನಿನ್ನೆ ಒಂದೇ ದಿನ ಹತ್ತು ಲಕ್ಷ ಅರವತ್ತು ಸಾವಿರ ಲಸಿಕೆ ನೀಡಲಾಗಿದೆ. ಅತಿದೊಡ್ಡ ರಾಜ್ಯಗಳಿದ್ದರೂ ಕೂಡ ನಮ್ಮ ರಾಜ್ಯದಲ್ಲಿ ಅತಿವೇಗವಾಗಿ ಲಸಿಕೆ ನೀಡಲಾಗಿದೆ. ಕೊರೊನಾ ನಿರ್ನಾಮ ಆಗಲು ಎರಡೂ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಲಸಿಕೆಗೆ ಕೊಡಿಸಲು ಹೆಚ್ಚು ಒತ್ತನ್ನು ನೀಡಿದವರು ಮೈಸೂರು ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ರಾಮದಾಸ್ ಅವರು. ಇಂದು ರಾಜ್ಯದಲ್ಲಿಯೇ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಸಂಪೂರ್ಣ ಲಸಿಕೆ ಪಡೆದ ಮೊದಲ ಕ್ಷೇತ್ರವೆಂದು ಘೋಷಿಸಿದರು. ರಾಮದಾಸ್ ಅವರ ನಾಯಕತ್ವದಲ್ಲಿ ಎರಡು ಲಕ್ಷ ನಲ್ವತ್ತು ಸಾವಿರಕ್ಕೂ ಅಧಿಕ ಲಸಿಕಾ ಡೋಸ್ ನೀಡಲಾಗಿದೆ ಎಂದರು.
ಕೋವಿಡ್ ಬಂದಮೇಲೆ ಜನರಿಗೆ ಆರೋಗ್ಯ ಎಷ್ಟು ಮುಖ್ಯ ಎಂಬುದು ಅರ್ಥವಾಗಿದೆ. ಲಕ್ಷಾಂತರ ರೂ.ಹಣ ಇದೆ. ಬೆಡ್ ಸಿಗ್ತಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ರಾಜ್ಯದಲ್ಲಿ ಮೊದಲು ಕೇವಲ 4800ಆಮ್ಲಜನಕ ಸಹಿತ ಹಾಸಿಗೆ ಇತ್ತು. ಕೇವಲ ಒಂದೇ ವರ್ಷದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಆಮ್ಲಜನಕ ಅಳವಡಿಸಿದ ಹಾಸಿಗೆಗಳು ಇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೂಲಭೂತ ಸೌಕರ್ಯಗಳು, ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಕೇವಲ 312 ಟನ್ ಶೇಖರಣಾ ಸಾಮರ್ಥ್ಯ ವಿತ್ತು, ಈಗ 1300ಟನ್ ಶೇಖರಣಾ ಸಾಮರ್ಥ್ಯ ಹೆಚ್ಚಿಸಿದ್ದೇವೆ. ಖಂಡಿತವಾಗಲು ನಂಬಿಕೆ ಇದೆ ಮೂರನೇ ಅಲೆ ಬರಲ್ಲ. ಬಂದರೂ ಕೂಡ ಪರಿಣಾಮ ಕಾರಿಯಾಗಿ ನಿಯಂತ್ರಣ ದಲ್ಲಿಡುತ್ತೇವೆ. ಮುನ್ನೆಚ್ಚರಿಕೆ ಕ್ರಮ ಅಲಕ್ಷ್ಯ ಮಾಡಬೇಡಿ. ಮಾರ್ಗಸೂಚಿ ಏನಿದೆ ಅದರ ಪ್ರಕಾರ ನಡೆದುಕೊಳ್ಳಿ. ಅನಗತ್ಯ ಮಾಸ್ಕ್ ತೆಗೆದು ಹೆಚ್ಚು ಜನ ಸೇರುವುದು ಮಾಡಬೇಡಿ. ಜನರು ಹೆಚ್ಚು ಸೇರುವುದನ್ನು ಕಡಿಮೆ ಮಾಡಿ ಎಂದು ಸಲಹೆ ನೀಡಿದರು.
ನವೆಂಬರ್ ಡಿಸೆಂಬರ್ ನಲ್ಲಿ ರಾಜ್ಯದ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು. 12ರಿಂದ 17ವರ್ಷದ ವರೆಗಿನ ಮಕ್ಕಳ ಲಸಿಕೆ ಸಂಶೋಧನೆ ಮಾಡಲಾಗಿದ್ದು ಕೊನೆಯ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಪರವಾನಿಗೆ ಸಿಕ್ಕಲ್ಲಿ ಮಕ್ಕಳಿಗೂ ಲಸಿಕೆ ನೀಡಲಾಗುವುದು ಎಂದರು.
6ನೇ ತರಗತಿಯ ಮಕ್ಕಳಿಂದ ಶಾಲೆ ಆರಂಭವಾಗಿದೆ. 0.008 ಪ್ರಕರಣ ಗಳಷ್ಟೇ ಇದೆ. ಮೈಸೂರು ದಸರಾ ಸದ್ಯದಲ್ಲೇ ಆರಂಭವಾಗಲಿದೆ. ಕೋವಿಡ್ ಕೊನೆಯ ಹಂತದಲ್ಲಿದೆ. ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ನೋಡಿ. ಮುಂದಿನ ವರ್ಷ ನೂರಕ್ಕೆ ನೂರು ದೊಡ್ಡ ಮಟ್ಟದ ದಸರಾ ಆಗಲಿ. ಲಕ್ಷಾಂತರ ಜನ ಸೇರುವ ದಿನ ಮುಂದಿನ ವರ್ಷದಿಂದಲೇ ಬರಲಿ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ. ರಾಮದಾಸ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷೇ ಮಂಗಳಾ ಸೋಮಶೇಖರ್, ಡಾ.ನಂಜರಾಜ್, ಆರೋಗ್ಯಾ ಧಿಕಾರಿಗ ಡಾ.ಪ್ರಸಾದ್, ಜಯಂತ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: