ಮೈಸೂರು

ನಾಳೆ ಇಂಧನ ಸಚಿವರ ಜಿಲ್ಲಾ ಪ್ರವಾಸ

ಮೈಸೂರು, ಸೆ. 30:- ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್‌ಕುಮಾರ್ ಅವರು ಅಕ್ಟೋಬರ್ 1 ರಂದು ಮೈಸೂರು ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದಾರೆ.
ಅಕ್ಟೋಬರ್ 1ರಂದು ಬೆಳಗ್ಗೆ 10.30ಕ್ಕೆ ವಿದ್ಯಾರಣ್ಯಪುರಂ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಎದುರಿನ ಉದ್ಯಾನವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನೋತ್ಸವದ ಅಂಗವಾಗಿ “ಮೋದಿ ಯುಗ್ ಉತ್ಸವ್ ಸೂರ್ಯವಥ್-ನವೀಕರಿಸಬಹುದಾದ ಇಂಧನಗಳ ಯೋಜನೆ ಅನುಷ್ಠಾನ ಮತ್ತು ಗ್ರಾಹಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಬೆಳಗ್ಗೆ 11.30ಕ್ಕೆ ಚೆಸ್ಕಾಂ ಕೇಂದ್ರ ಕಛೇರಿ CESCOM TIMS workshop co ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 12.30ಕ್ಕೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮೈಸೂರು ದಸರಾ ಕಾರ್ಯಕ್ರಮಗಳ ಕುರಿತು ಜಿಲ್ಲಾಧಿಕಾರಿಗಳೊಡನೆ ಚರ್ಚೆ ನಡೆಸುವರು. ನಂತರ ಕೇಂದ್ರ ಸ್ಥಳಕ್ಕೆ ಹಿಂದಿರುಗುವರು.

Leave a Reply

comments

Related Articles

error: