ಪ್ರಮುಖ ಸುದ್ದಿಮೈಸೂರು

ಮಾವುತರು- ಕಾವಾಡಿಗರಿಗೆ ಖುದ್ದು ಉಪಹಾರ ಬಡಿಸಿದ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಅ.1:- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ದಸರಾ ವೈಭವ ಕಳೆಗಟ್ಟಿದೆ. ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಅರಮನೆ ಆವರಣದಲ್ಲಿ ಮಾವುತರು ಮತ್ತು ಕಾವಾಡಿಗರಿಗೆ ಏರ್ಪಡಿಸಲಾದ ಉಪಹಾರ ಕೂಟದಲ್ಲಿ ಭಾಗವಹಿಸಿದರು.

ಮೈಸೂರು ದಸರಾ ಅಂಗವಾಗಿ ಮಾವುತರು, ಕಾವಾಡಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ಮೈಸೂರು ಜಿಲ್ಲಾಡಳಿತ ವತಿಯಿಂದ ಅರಮನೆ ಆವರಣದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮಾವುತರಿಗೆ ಉಪಹಾರ ಬಡಿಸಿದರು. ಆನೆಗಳ ಪಾಲನೆ, ಪೋಷಣೆ ಮಾಡುತ್ತಿರುವ ಕಾವಾಡಿಗರು ಹಾಗೂ ಮಾವುತರ ಕಾರ್ಯವನ್ನು ಪ್ರಶಂಸಿ ಅವರ ಯೋಗಕ್ಷೇಮ ವಿಚಾರಿಸಿದರು.

ಸಚಿವ ಎಸ್ ಟಿ ಸೋಮಶೇಖರ್ ಮಾವುತರ ಜೊತೆ ಉಪಹಾರ ಸೇವಿಸಿದರು. ಈ ವೇಳೆ ಸಚಿವ ಸೋಮಶೇಖರ್​ ಅವರ ಜೊತೆ ಶಾಸಕರಾದ ಎಸ್ ಎ ರಾಮದಾಸ್, ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್,  ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ಸೇರಿ ಹಲವು ಅಧಿಕಾರಿಗಳು ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಸರಳ ದಸರಾಗೆ ಎಲ್ಲಾ ತಯಾರಿ ನಡೆದಿದೆ. ಸಂಜೆ ಒಳಗಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಅಂತಿಮವಾಗಲಿದೆ. ಹಂಸಲೇಖ ಸೇರಿದಂತೆ ನಾಡಿನ ಹಲವು ಕಲಾವಿದರಿಗೆ ಕಾರ್ಯಕ್ರಮ ನೀಡಲಾಗುತ್ತದೆ.  ಉದ್ಘಾಟನೆಗೆ 500ಮಂದಿ ಕೇಳಿದ್ದೇವೆ. 100ಜನಕ್ಕೆ ಕೊಟ್ಟಿದ್ದಾರೆ. ಸರ್ಕಾರಕ್ಕೆ ಮನವಿ ಮಾಡಿ 500ಮಂದಿಗೆ ಕೊಡಲು ಕೇಳಿದ್ದೇನೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 500ಮಂದಿ, ಜಂಬೂ ಸವಾರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು 500ಮಂದಿಗೆ ಕೇಳಿದ್ದೇವೆ. ಸಾಂಸ್ಕೃತಿಕ ಕಾರ್ಯಕ್ರಮವನ್ನು ಈ ಸಲ ಜಾಸ್ತಿ ಕೇಳಿದ್ದೇವೆ. ಕಳೆದ ವರ್ಷ ಹೆಚ್ಚು ಮಂದಿ ಕಲಾವಿದರಿಗೆ ಅವಕಾಶ ನೀಡಲು ಆಗಿಲ್ಲ. ಅದಕ್ಕೆ ಈ ಸಲ ವಿಪರೀತ ಬೇಡಿಕೆ ಇತ್ತು ಅದ ಕ್ಕೆದಿನಕ್ಕೆ ಇಬ್ಬರು-ಮೂರು, ಹೆಚ್ಚು ಕಲಾವಿದರನ್ನು ಅವಕಾಶ ನೀಡಲು ಕೇಳಿದ್ದೇವೆ ಎಂದರು. ಮಾವುತರಿಗೆ ಏನೆಲ್ಲ ವ್ಯವಸ್ಥೆ ಬೇಕೋ ಎಲ್ಲವನ್ನೂ ಮಾಡಿದ್ದೇವೆ. ಯಾವ ರೀತಿಯಲ್ಲೂ ಯಾವುದೇ ಕೊರತೆ ಇಲ್ಲದಂತೆ ಮಾಡಿದ್ದೇವೆ ಎಂದರು.

ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮ, ಜಂಬೂಸವಾರಿ ಎಲ್ಲದಕ್ಕೂ 500 ಮಂದಿಗೆ ಕೇಳಿದ್ದೇವೆ ಎಂದರು. 6ಕೋಟಿ ಬಿಡುಗಡೆಯಾಗಿದೆ. ಮೈಸೂರು, ಮಂಡ್ಯ ಚಾಮರಾಜನಗರ ಎರಡಕ್ಕೂ ಕೊಡಲು ಹೇಳಿದ್ದಾರೆ. ಎಲ್ಲವನ್ನೂ ತೀರ್ಮಾನಿಸಲಾಗುವುದು ಎಂದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: