ಮೈಸೂರು

ಮೈಸೂರು ದಸರಾ-2021 ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಸ್ಟರ್ ಬಿಡುಗಡೆ

ಮೈಸೂರು,ಅ.1:-ಮೈಸೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಇಂಧನ ಸಚಿವ ಸುನೀಲ್ ಕುಮಾರ್ ಮತ್ತು ಸಹಕಾರಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಮೈಸೂರು ದಸರಾ-2021 ಸಾಂಸ್ಕೃತಿಕ ಕಾರ್ಯಕ್ರಮಗಳ ಪೋಸ್ಟರ್ ಬಿಡುಗಡೆಗೊಳಿಸಿದರು.

ಪ್ರತಿವರ್ಷದಂತೆ ಈ ವರ್ಷವೂ ಕೂಡ ಅ.7ರಿಂದ 15ರವರೆಗೆ ನಡೆಯುವ ದಸರಾ ಮಹೋತ್ಸವ ಸಂದರ್ಭದಲ್ಲಿ ಸೆಸ್ಕ್ ವತಿಯಿಂದ ವಿದ್ಯುತ್ ದೀಪಾಲಂಕಾರ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಕೂಡ ವಿದ್ಯುತ್ ಮಿತ ಬಳಕೆಯ ಪರಿಸರ ಸ್ನೇಹಿ ಬಲ್ಬ್ ಗಳನ್ನು ಬಳಸಿ ಆಕರ್ಷಕ ದೀಪಾಲಂಕಾರ ವ್ಯವಸ್ಥೆಯನ್ನು ಕಲ್ಪಿಸಲು ಯೋಜಿಸಲಾಗಿದೆ.

ಹಿಂದಿನ ವರ್ಷಗಳಿಗಿಂತ ಈ ವರ್ಷದ ದಸರಾ ದೀಪಾಲಂಕಾರ ವ್ಯವಸ್ಥೆಯನ್ನು ವಿನೂತನವಾಗಿ ಹಾಗೂ ಆಕರ್ಷಕವಾಗಿ ನೆರವೇರಿಸಲು ಯೋಜಿಸಲಾಗಿದೆ.

ಮೈಸೂರಿನ ರಾಜಮಾರ್ಗ ಹಾಗೂ ಅರಮನೆಯ ಸುತ್ತಮುತ್ತ ರಸ್ತೆಗಳನ್ನು ಹಳೆಯ ಪಾರಂಪರಿಕ ದೀಪಾಲಂಕಾರಕ್ಕೆ ಹೋಲುವಂತೆ ಮಾಡುವ ಅತ್ಯಂತ ಕಡಿಮೆ ವಿದ್ಯುತ್ ಬಳಕೆಯಾಗುವ 9ವ್ಯಾಟ್ಸ್ ಬಲ್ಬ್ ಗಳ ಅಳವಡಿಸಿ ದೀಪಾಲಂಕಾರ ಮಾಡಲಾಗುತ್ತಿದೆ. ದಸರಾ-2021 ನ್ನು ವಿಶೇಷವಾಗಿ ಮೈಸೂರು ಹೊರವರ್ತುಲ ರಸ್ತೆಯ ಒಳಭಾಗದಲ್ಲಿ ಬರುವ ಎಲ್ಲಾ ವೃತ್ತಗಳು, ಪ್ರಮುಖ ರಸ್ತೆಗಳನ್ನು ವಿನೂತನ ರೀತಿಯಲ್ಲಿ ಆಕರ್ಷಣೀಯವಾಗಿ ಮೂಡಿ ಬರುವಂತೆ ದೀಪಾಲಂಕಾರ ಮಾಡಲಾಗುವುದು.

(ರಸ್ತೆಗಳ ಉದ್ದ 121 ಸಂಖ್ಯೆ/102.3.ಕಿಮೀ,  ವೃತ್ತಗಳ ಸಂಖ್ಯೆ 70, ಪ್ರತಿಕೃತಿಗಳು 32, ಇತರೆ ವಿವಿಧ ದೀಪಾಲಂಕಾರದ ಕಾಮಗಾರಿಗಳು 19, ಕಾಮಗಾರಿಯ ಅಂದಾಜು ಮೊತ್ತ 460.65, ತಾತ್ಕಾಲಿಕ ವಿದ್ಯುತ್ ಸಂಪರ್ಕ ಭಾರ(ಕಿ.ವ್ಯಾಗಳಲ್ಲಿ) 3011, ವಿದ್ಯುತ್ ಬಳಕೆಯ ಪ್ರಮಾಣ(ಯೂನಿಟ್ ಗಳಲ್ಲಿ) 135495,)

ರಸ್ತೆಗಳ  ಉದ್ದ, ವೃತ್ತಗಳ ಸಂಖ್ಯೆಗಳು, ಪ್ರತಿಕೃತಿಗಳು, ಇತರೆ  ವಿನೂತನ ಮಾದರಿಯ ದೀಪಾಲಂಕಾರ ವ್ಯವಸ್ಥೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಈ ಬಾರಿ ಅಂದಾಜು 3.11 ಮೆ.ವ್ಯಾ ವಿದ್ಯುತ್ ಬೇಡಿಕೆ ಇದ್ದು 135495 ಯೂನಿಟ್ ಗಳಷ್ಟು ಬಳಕೆಯಾಗಲಿದೆ ಎಂದು ದೀಪಾಲಂಕಾರ ಸಮಿತಿಯ ಕಾರ್ಯಾಧ್ಯಕ್ಷರಾದ ಅಧೀಕ್ಷಕ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್,ನಂಜನಗೂಡು ಶಾಸಕ ಹರ್ಷವರ್ಧನ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: