ಕರ್ನಾಟಕಪ್ರಮುಖ ಸುದ್ದಿ

ಆಯುಷ್ ಔಷಧ ಪದ್ದತಿ ತುಂಬಾ ಪರಿಣಾಮಕಾರಿ : ಪ್ರೀತಂ.ಜೆ.ಗೌಡ

ರಾಜ್ಯ(ಹಾಸನ) ಅ.2:-ಆಯುರ್ವೇದ ನಮ್ಮ ಭಾರತೀಯ ಪದ್ದತಿಯಾಗಿರುವುದರಿಂದ ಆಯುಷ್ ಪದ್ದತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಶಾಸಕರಾದ ಪ್ರೀತಂ.ಜೆ.ಗೌಡ ತಿಳಿಸಿದ್ದಾರೆ.

ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ರಾಜ್ಯವಲಯದ ಯೋಜನೆಯಡಿ ದೊಡ್ಡಕೊಂಡಗೊಳದಲ್ಲಿಂದು ಏರ್ಪಡಿಸಿದ್ದ 2021-22 ನೇ ಸಾಲಿನ ಆಯುಷ್ ಸೇವಾ ಗ್ರಾಮ (ಎಸ್.ಸಿ.ಪಿ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಣ್ಣ ಪುಟ್ಟ ಖಾಯಿಲೆಗಳಿಗೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮನೆ ಮದ್ದುಗಳನ್ನು ಆದಷ್ಟು ಎಂದು ಬಗ್ಗೆ ತಿಳಿಸಿದರು.

ಕರ್ನಾಟಕ ಸರ್ಕಾರವು ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿಯಲ್ಲಿ ಎಲ್ಲರಿಗೂ ಆರೋಗ್ಯಯುತ ಜೀವನ ನಡೆಸಲು ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಿದ್ದು ಅದರಲ್ಲಿ ಆಯುಷ್ ಇಲಾಖೆಯ ಮುಖಾಂತರ ಆಯುಷ್ ಸೇವಾ ಗ್ರಾಮ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದ್ದು, ಈ ಯೋಜನೆಯನ್ನು ಗ್ರಾಮದ ಸಮಸ್ತ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕರು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಫಲಾನುಭವಿಗಳಿಗೆ ಔಷಧಿಯ ಸಸ್ಯಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಸದಸ್ಯರಾದ ವಾಸು, ಗ್ರಾಮದ ದೊಡ್ಡಕೊಂಡಗೊಳ. ಮುಖ್ಯಸ್ಥರಾದ ವರದರಾಜು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ವೀಣಾಲತಾ.ಎ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಡಾ. ಶಿವಣ್ಣ, ಆಯುಷ್ ವೈದ್ಯಾಧಿಕಾರಿಗಳಾದ ಡಾ. ಮೂಸೇಬ್ಯಾರಿ, ಡಾ. ಸುಜಾತ, ಡಾ. ನಮ್ರತಾ, ಡಾ. ಗೀತಾ, ಡಾ.ಮುಸ್ತಪ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಇತರೆ ಅಧಿಕಾರಿ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: