
ಮೈಸೂರು
ಅಪರಿಚಿತ ವ್ಯಕ್ತಿಯ ಶವ ಪತ್ತೆ
ಮೈಸೂರು, ಅ. 1 :- ಮೈಸೂರಿನ ವರುಣಾ ಚಾನೆಲ್ ನೀರಿನ ಬಳಿ ಸೆಪ್ಟೆಂಬರ್ 29 ರಂದು ಸುಮಾರು 35-40 ವರ್ಷದ ಗಂಡಸಿನ ಶವ ಪತ್ತೆಯಾಗಿದೆ.
ಪೊಲೀಸ್ ಠಾಣೆಯಲ್ಲಿ ಕಲಂ-174ರ ಅನ್ವಯ ಪ್ರಕರಣ ದಾಖಲಾಗಿದೆ.
ಮೃತನ ಚಹರೆ ಇಂತಿದೆ
ದೃಡಕಾಯ ಶರೀರವಾಗಿದ್ದು, ಬೊಕ್ಕ ತಲೆಯಾಗಿದ್ದು, ತಲೆಯ ಹಿಂಭಾಗ ಕಪ್ಪು ಕೂದಲು ಇರುತ್ತದೆ. ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ನೀಲಿ ಬಣ್ಣದ ಅಂಡರ್ವೇರ್ ಧರಿಸಿರುತ್ತಾರೆ, ಬಲಗೈನಲ್ಲಿ ಮಾದಮ್ಮ ಎಂಬ ಹಸಿರು ಹಚ್ಚೆ ಗುರುತು ಇರುತ್ತದೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಎಸ್.ಪಿ ಸಾಹೇಬರು: 0821-2520040, ಜಿಲ್ಲಾ ಕಂಟ್ರೋಲ್ ರೂಂ: 0821-2444800, ಮೈಸೂರು ಸೌತ್ ಪೊಲೀಸ್ ಠಾಣೆ:0821-2444955 ಸಂಪರ್ಕಿಸುವಂತೆ ದಕ್ಷಿಣ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.