
ಕರ್ನಾಟಕಪ್ರಮುಖ ಸುದ್ದಿ
ವಿಧಾನಸೌಧದ ಆವರಣದಲ್ಲಿ ಭಾರೀ ಶಬ್ದ : ಗಲಿಬಿಲಿಗೊಂಡ ಸಾರ್ವಜನಿಕರು
ಬೆಂಗಳೂರು : ವಿಧಾನಸೌಧದ ಆವರಣದಲ್ಲಿ ಪೊಲೀಸ್ ಜೀಪ್ನ ಆಕ್ಯಲ್ ಕಟ್ ಆಗಿ ಟೈರ್ ಬರ್ಸ್ಟ್ ಆದ ಘಟನೆ ಇಂದು ನಡೆದಿದೆ. ಘಟನೆ ಸಂಭವಿಸಿದಾಗ ವಿಧಾನಸೌಧದ ಆವರಣದಲ್ಲಿ ಬಾಂಬ್ ಸ್ಫೋಟವಾದ ರೀತಿ ಭಾರೀ ಶಬ್ದ ಕೇಳಿಬಂದ ಕಾರಣ ಭದ್ರತಾ ಸಿಬ್ಬಂದಿ ಮತ್ತು ಸಾರ್ವಜನಿಕರು ಗಲಿಬಿಲಿಗೊಂಡರು. ನಂತರ ವಿಷಯ ತಿಳಿದು ನಿಟ್ಟುಸಿರುಬಿಟ್ಟರು.
(ಎಸ್.ಎನ್/ಎನ್.ಬಿ.ಎನ್)