ಮೈಸೂರು

ಶಾಸಕ ತನ್ವೀರ್ ಸೇಠ್ ಹುಟ್ಟುಹಬ್ಬದ ಪ್ರಯುಕ್ತ ಕೊರೊನಾ ವಾರಿಯರ್ಸ್ ಗೆ ಸನ್ಮಾನ

ಮೈಸೂರು, ಅ.3:- ಮಾಜಿ ಸಚಿವ ಹಾಗೂ ಹಾಲಿ ನರಸಿಂಹರಾಜ ಕ್ಷೇತ್ರದ  ಶಾಸಕರಾದ  ತನ್ವೀರ್ ಸೇಠ್ ಅವರಿಗೆ ಹುಟ್ಟು ಹಬ್ಬದ ಅಂಗವಾಗಿ ತಮ್ಮ ಪ್ರಾಣವನ್ನು ‌ಲೆಕ್ಕಿಸದೆ ಜನರ ಸೇವೆ ಮಾಡಿದ ಕೊರೊನಾ ವಾರಿಯರ್ಸ್‌ ಗಳಾದ ಶುಶ್ರೂಷಕಿಯರನ್ನು ಅಭಿನಂದಿಸಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ  ರಾಜೇಶ್ವರಿ, ವಾರ್ಡ್ ನಂ37ರ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಶಶಿಕುಮಾರ್, ಡಿಸಿಸಿ ಸದಸ್ಯರಾದ ಅಣ್ಣಯ್ಯ,ಕಾಂಗ್ರೆಸ್ ಹಿರಿಯ ಮುಖಂಡರಾದ ಸೋಮಣ್ಣ,ಹರೀಶ್,ಸಂತೋಷ್,ಮದನ್.ಮಹೇಂದ್ರ,ಮಹದೇವ್.ಚಂದ್ರು,ಹರೀಶ್ ಗೌಡ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: