ಮೈಸೂರು

ಎಸ್.ಸಿ ಎಸ್.ಟಿ ಮೈನಾರಿಟಿ ಪಂಗಡಗಳ ಅಭಿವೃದ್ಧಿ , ವಿವಿಧ ಯೋಜನೆಗಳ ಸಂಪೂರ್ಣ ಮಾಹಿತಿಗಳಿಗೆ ಚಾಲನೆ

ಮೈಸೂರು, ಅ.3:- ಶಾಸಕರಾದ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ  ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಕೆ.ಆರ್ ಕ್ಷೇತ್ರದಲ್ಲಿ 20 ದಿನಗಳ ಮೋದಿ ಯುಗ್ ಉತ್ಸವ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಇಂದು ಸಂಜೆ ಅಶೋಕ ಪುರಂನಲ್ಲಿ ಕಾಂಕ್ರೀಟ್ ರಸ್ತೆಗೆ ಶಿಲಾನ್ಯಾಸ ನೆರವೇರಿಸಿ ಮತ್ತು ಎಸ್.ಸಿ ಎಸ್.ಟಿ ಮೈನಾರಿಟಿ ಪಂಗಡಗಳ ಅಭಿವೃದ್ಧಿ , ವಿವಿಧ ಯೋಜನೆಗಳ ಸಂಪೂರ್ಣ ಮಾಹಿತಿಗಳಿಗೆ ಚಾಲನೆಯನ್ನು ನೀಡಲಾಯಿತು.

ಅಶೋಕಪುರಂ ಪಾರ್ಕ್ ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವರಾದ  ಎ.ನಾರಾಯಣಸ್ವಾಮಿ ಹಾಗೂ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವರಾದ  ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ  ಶಾಸಕರಾದ ಎಸ್.ಎ.ರಾಮದಾಸ್ ಅವರು ಮಾಲಾರ್ಪಣೆ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ  ಶಾಸಕ ಎಸ್.ಎ.ರಾಮದಾಸ್ ಅವರು ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಈಗಾಗಲೇ ಕಾರ್ಯಕ್ರಮಗಳಿಗೆ ಚಾಲನೆಯನ್ನು ಸಚಿವರುಗಳು ನೀಡಿದ್ದಾರೆ. ಸುಮಾರು 6 ಸಾವಿರ ಜನ ಪರಿಶಿಷ್ಟ ಜಾತಿ, ಪಂಗಡಗಳ ಜನರಿಗೆ ಪ್ರಯೋಜನವಾಗುವ ಯೋಜನೆಗಳಿಗೆ ಇಂದು ಚಾಲನೆ ನೀಡಿದ್ದೇವೆ. ನಾಲ್ಕು ಇಲಾಖೆಗಳ ಸಮ್ಮಿಲನವನ್ನು ಮಾಡಿ ಸಮಾಜದ ಎಲ್ಲಾ ವರ್ಗಗಳಿಗೆ ಸರ್ಕಾರ ತಲುಪಬೇಕು ಎಂಬುದಕ್ಕೆ ಯೋಜನೆ ರೂಪಿಸಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರುಗಳು ನಿಮ್ಮ ಇಲಾಖೆಯಲ್ಲಿ ಒಂದು ಹೊಸ ರೂಪವನ್ನು ತನ್ನಿ ಎಂದು  ಕೋರಿದರು.

ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವರಾದ  ಕೋಟಾ ಶ್ರೀನಿವಾಸ್ ಪೂಜಾರಿ  ಮಾತನಾಡಿ ಕೆಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಯಾವ ಯಾವ ಯೋಜನೆ ಇದೆ, ಅದನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವುದು ಹೇಗೆ ಎಂಬ ಅಂಶವನ್ನು ಇಟ್ಟುಕೊಂಡು ಈ 20 ದಿನದ ಕಾರ್ಯಕ್ರಮವನ್ನು ರಾಮದಾಸ್ ಅವರು ನಡೆಸುತ್ತಿದ್ದಾರೆ ಎಂದರು. ಭೂಮಿಗೆ ಬಿದ್ದ ಬೀಜ ಹಾಗೂ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಹೇಗೆ ಫಲ ಕೊಡುತ್ತದೆಯೋ ಅದೇ ರೀತಿ ರಾಮದಾಸ್ ಅವರು ಹಾಕಿರುವ ಈ ಯೋಜನೆಗಳು ನಮ್ಮ ಸರ್ಕಾರಕ್ಕೆ ,ನಮ್ಮ ಸಮಾಜಕ್ಕೆ ಇಂದಲ್ಲಾ ನಾಳೆ ಫಲ ನೀಡುತ್ತದೆ ಎಂದರು.

ಕೇಂದ್ರ ದ ರಾಜ್ಯ ಖಾತೆ ಸಚಿವರಾದ ನಾರಾಯಣಸ್ವಾಮಿ ಮಾತನಾಡಿ  17.09.2021 ರಿಂದ 06.10.2021 ರ ತನಕ ನಿರಂತರವಾಗಿ ಸಮಾಜಕ್ಕೆ ಯಾವುದಾದರೊಂದು ಯೋಜನೆಗಳನ್ನು ತಲುಪಿಸುವ ಮೋದಿ ಯುಗೋತ್ಸವ ಕಾರ್ಯಕ್ರಮವು ದೇಶದಲ್ಲೇ ಮೊದಲಿರಬಹುದು. ಇದರಿಂದ ಎಲ್ಲಾ ಜನಪ್ರತಿನಿಧಿಗಳು ಕಲಿಯಬೇಕಾದದು ಬಹಳಷ್ಟಿದೆ. ಸರ್ಕಾರಿ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಯೋಜನೆಗಳ ಅನುಷ್ಠಾನದ ಜೊತೆಗೆ ಭ್ರಷ್ಟಾಚಾರ ರಹಿತವಾದ ಆಡಳಿತ ನಡೆಸುವ ಗುರಿಯನ್ನು ಹೊಂದಿದ್ದೇವೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ಯಾವುದಾದರು ಅಧಿಕಾರಿ ಭ್ರಷ್ಟಾಚಾರ ದಲ್ಲಿ ತೊಡಗಿದ್ದರೆ ಅವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಿದೆ. ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಯಾವುದೇ ಅನುದಾನದ ಬೇಡಿಕೆ ನೀಡಿದರು ಅದನ್ನು ಮಂಜೂರು ಮಾಡಿಕೊಡುತ್ತೇನೆ ಹಾಗೂ ರಾಮದಾಸ್ ರವರು ಯಾವ ಯೋಜನೆಗಳನ್ನು ತಂದರು ಅದನ್ನು ಸ್ವೀಕರಿಸುತ್ತೇನೆ ಎಂದರು.

ಮಾದಾರ ಚೆನ್ನಯ್ಯ ಶ್ರೀಗಳು ಆಶೀರ್ವಚನ ನೀಡಿ
ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ ನಾವು ಈ ಸಂದರ್ಭದಲ್ಲಿ ಸ್ವಾಭಿಮಾನಿಗಳಾಗಬೇಕು ಆಗ ಮಾತ್ರ ದೇಶ ಮುಂದೆ ಬರುತ್ತದೆ, ನಾವು ಸ್ವಾಭಿಮಾನಿಗಳಾಗಬೇಕೆಂದರೆ ಸರ್ಕಾರವೂ ಸಹ ಅದಕ್ಕೆ ಬೇಕಾದಂತಹ ಅವಕಾಶಗಳನ್ನು ನೀಡಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧ್ಯಕ್ಷರಾದ ಬಿಂಧ್ಯಾ, ಕೆ.ಆರ್ ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಎಂ.ವಡಿವೇಲು, ಉಪಾಧ್ಯಕ್ಷರಾದ ಜೆ.ರವಿ, ಸಂತೋಷ್ ಶಂಭು,ನಗರಪಾಲಿಕಾ ಸದಸ್ಯರುಗಳು, ಕ್ಷೇತ್ರದ ಬಿ.ಎಲ್.ಎ 1 ಆದ ಪ್ರಸಾದ್ ಬಾಬು, ಆಶ್ರಯ ಸಮಿತಿ ಉಪಾಧ್ಯಕ್ಷರಾದ  ವಿದ್ಯಾ ಅರಸ್,ಆಶ್ರಯ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ಮೈ.ಪುರಾಜೇಶ್, ನಗರ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಸಿ.ಈಶ್ವರ್, ಕಾರ್ಯದರ್ಶಿ ನಾಗರಾಜ್ ಬಿಲ್ಲಯ್ಯ, ಒ.ಬಿಸಿ ಅಧ್ಯಕ್ಷರಾದ ಶಿವಪ್ಪ, ಎಸ್.ಟಿ.ಅಧ್ಯಕ್ಷರಾದ ನಾಗರಾಜು. ಪ್ರಧಾನ ಕಾರ್ಯದರ್ಶಿ ವಿಜಯ ನಾಯ್ಕ ಕೆಆರ್.ಕ್ಷೇತ್ರ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಮುರುಳಿದರ್, ಪ್ರಧಾನಕಾರ್ಯದಶಿಗಳಾದ ಎಂ. ರಾಜು, ಪುನೀತ್ ಯುವಮೋರ್ಚಾ ಅಧ್ಯಕ್ಷರಾದ ಮನು ಶೈವ(ಅಪ್ಪಿ) ಪ್ರಮುಖರಾದ ಮಧೂಸೂದನ್ , ರಾಜಣ್ಣ, ರಂಗಸ್ವಾಮಿ, ಮಹದೇವ್, ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: