ಮೈಸೂರು

ಪತಿ ಅಗಲಿಕೆಯಿಂದ ಮನನೊಂದ ನವವಿವಾಹಿತೆ ನೇಣಿಗೆ ಶರಣು

ಮೈಸೂರು,ಅ.4:- ಪತಿ ಅಗಲಿಕೆಯಿಂದ ಮನನೊಂದ ನವವಿವಾಹಿತೆಯೋರ್ವರು ಮನನೊಂದು ನೇಣಿಗೆ ಶರಣಾದ ಘಟನೆ ಮೈಸೂರಿನ ಬಿ.ಎಂ.ಶ್ರೀ ನಗರದಲ್ಲಿ ನಡೆದಿದೆ.

ಮೃತರನ್ನು   ಹೀನಾಕೌಸರ್(27) ಎಂದು ಗುರುತಿಸಲಾಗಿದೆ. 3 ತಿಂಗಳ ಹಿಂದಷ್ಟೆ ನರಸಿಂಹ ಎಂಬವರನ್ನು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು.    ಬಿ.ಎಂ.ಶ್ರೀ ನಗರದಲ್ಲಿ ವಾಸವಿದ್ದರು. ಎರಡು ದಿನಗಳ ಹಿಂದೆ ನರಸಿಂಹ ಹೃದಯಾಘಾತದಿಂದ ನಿಧನರಾದರು. ಇದರಿಂದ ಹೀನಾಕೌಸರ್ ಮನನೊಂದಿದ್ದರು. ಕೆಲ ಹಿರಿಯರು ಹೀನಾ ಕೌಸರ್ ಗೆ ಆತ್ಮಸ್ಥೈರ್ಯ ತುಂಬಿದ್ದರು.  ಆದರೂ ಪತಿಯ ಅಗಲಿಕೆಯ ನೋವಿನಿಂದ ಹೀನಾಕೌಸರ್ ನೇಣಿಗೆ ಶರಣಾಗಿದ್ದಾರೆ.

ಮೇಟಗಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: