ಕರ್ನಾಟಕನಮ್ಮೂರುಪ್ರಮುಖ ಸುದ್ದಿಮೈಸೂರು

ಅನುಮತಿ ಇಲ್ಲದೆ ಚಿತ್ರೀಕರಣ: ಕ್ಯಾಮರಾ ವಶಕ್ಕೆ

ಪೊಲೀಸರ ಅನುಮತಿಯಿಲ್ಲದೇ ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಡ್ರೋಣ್ ಕ್ಯಾಮರಾ ಬಳಸಿ ಚಿತ್ರೀಕರಣ ನಡೆಸುತ್ತಿದ್ದ ನಾಲ್ವರು ಯುವಕರನ್ನು ವಿಚಾರಣೆ ನಡೆಸಿದ ಡಿಸಿಪಿ ಶೇಖರ್ ಅವರಿಂದ ಕ್ಯಾಮರಾವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಚಿತ್ರೀಕರಣ ನಡೆಸುತ್ತಿದ್ದ ಯುವಕರು ತಮಿಳುನಾಡು ಮೂಲದವರಾಗಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದಿದ್ದರು ಎನ್ನಲಾಗಿದೆ. ಆದರೆ ಭದ್ರತಾ ದೃಷ್ಟಿಯಿಂದ ಪೊಲೀಸರ ಅನುಮತಿಯನ್ನು ಪಡೆಯಬೇಕಿತ್ತು. ಇವರು ಪಡೆದಿಲ್ಲದ ಕಾರಣ ಡಿಸಿಪಿ ಶೇಖರ್ ಕ್ಯಾಮರಾವನ್ನು ತಮ್ಮ ವಶಕ್ಕೆ ಪಡೆದಿದ್ದರು. ಇದೀಗ ಸೂಕ್ತ ದಾಖಲೆಗಳನ್ನು ತೋರಿಸಿದ ಹಿನ್ನೆಲೆಯಲ್ಲಿ ಅವರಿಂದ ವಶಪಡಿಸಿಕೊಂಡ ವಸ್ತುಗಳನ್ನು ಹಿಂದಿರುಗಿಸಲಾಗಿದೆ.

Leave a Reply

comments

Related Articles

error: