ಮೈಸೂರು

ಇಂದು ರಾಜಮಾತೆಗೆ ದಸರಾ ಆಹ್ವಾನ ನೀಡಲಿರುವ ಸಚಿವ ಎಸ್ ಟಿ ಎಸ್

ಮೈಸೂರು, ಅ.5:- ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು ಸಂಸದ ಪ್ರತಾಪ್ ಸಿಂಹ,ಶಾಸಕರಾದ ಎಲ್. ನಾಗೇಂದ್ರ,ಎಸ್.ಎ.ರಾಮದಾಸ್, ಹಾಗೂ ಗಣ್ಯರೊಂದಿಗೆ ಇಂದು ಮಧ್ಯಾಹ್ನ 1:45ರ ವೇಳೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿ ಮಾಡಿ, ದಸರಾ ಮಹೋತ್ಸವಕ್ಕೆ ಆಹ್ವಾನಿಸಲಿದ್ದಾರೆ.

ಇಂದು ಯದುವಂಶದ ಪ್ರಮೋದಾದೇವಿ ಒಡೆಯರ್​ಗೆ ದಸರಾಗೆ ಆಹ್ವಾನ ನೀಡಲಿದ್ದಾರೆ. ಅರಮನೆಯ ನಿವಾಸದಲ್ಲಿ ಭೇಟಿಯಾಗಿ, ಗೌರವ ರಾಜಧನ ನೀಡಿ ದಸರಾಗೆ ಆಹ್ವಾನಿಸುತ್ತಾರೆ. ಇದೇ ವೇಳೆ ದಸರಾಗೆ ಸಹಕಾರ ನೀಡುವಂತೆ ಮನವಿ ಮಾಡಲಿದ್ದಾರೆ.

Leave a Reply

comments

Related Articles

error: