ಪ್ರಮುಖ ಸುದ್ದಿಮೈಸೂರು

ಯುವಜನತೆ ಯಾರೂ ದುಶ್ಚಟಗಳಿಗೆ ಬಲಿಯಾಗಿ ಕುಟುಂಬಕ್ಕೆ ನೋವು ನೀಡಬಾರದು : ಸಚಿವ ವಿ.ಸೋಮಣ್ಣ

ಮೈಸೂರು,ಅ.5:- ಯುವಜನತೆ ಯಾರೂ ದುಶ್ಚಟಗಳಿಗೆ ಬಲಿಯಾಗಿ ಕುಟುಂಬಕ್ಕೆ ನೋವು ನೀಡಬಾರದು ಎಂದು ವಸತಿ ಸಚಿವ ವಿ.ಸೋಮಣ್ಣ ಮನವಿ ಮಾಡಿದರು.

ಅವರಿಂದು ಮೈಸೂರು ಪ್ರವಾಸದಲ್ಲಿದ್ದು, ಈ ಸಂದರ್ಭ ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ-ಯುವಜನತೆಗೆ ನಿಮ್ಮ ಸಂದೇಶ ಎಂದ   ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿರುವುದನ್ನು ಭೇದಿಸತಕ್ಕ ಕೆಲಸವನ್ನು ನಮ್ಮ  ಪೊಲೀಸ್ ಇಲಾಖೆಯವರು ಮಾಡಿದ್ದಾರೆ. ಮಾಡುತ್ತಿದ್ದಾರೆ.  ಸಾರ್ವಜನಿಕರ ನೋವನ್ನು ತೊಡೆಯುವ ಪ್ರಾಮಾಣಿಕ  ಕೆಲಸ ಮಾಡಿದ್ದಾರೆ. ನಾನು ಬೆಂಗಳೂರಿಗೆ ಬಂದು 52ವರ್ಷ ಆಯಿತು. ನನಗದರ  ಬಗ್ಗೆ (ಅ.ಆ) ಏನೂ ಗೊತ್ತಿಲ್ಲ.  ಇದನ್ನು ಯಾವಾಗಿಂದ ಇತ್ತು, ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಯುವ ಸಮುದಾಯ ಯಾರೂ ಕೂಡ ಇಂತಹ ದುಶ್ಚಟಗಳಿಗೆ  ಬಲಿಯಾಗದೆ ಕುಟುಂಬದ ನೋವಿನ ಜೊತೆಯಲ್ಲಿ ಸಾರ್ವಜನಿಕ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಯಾಗಬಾರದು ಎಂದು ಸಲಹೆ ನೀಡಿದರು.

14-15ರ ಹರೆಯ ಹಾಗೂ 30ವರ್ಷದ ಬಹತೇಕ ಯುವಕರಿಗೆ ಈ ಪಿಡುಗಿದೆ. ಸರ್ಕಾರ ಎಷ್ಟೇ ನಿಯಂತ್ರಣಕ್ಕೆ ತಂದರೂ ಕೂಡ ಅವರ ಕುಟುಂಬ, ತಂದೆ-ತಾಯಿಗಳು ಕೂಡ ಮುತುವರ್ಜಿ ವಹಿಸಬೇಕು ಎಂದರು.

ಆಶ್ರಯ ಮನೆ ಯೋಜನೆಯ ಕುರಿತು ಪ್ರತಿಕ್ರಿಯಿಸಿ  ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಚಿಂತನೆ ಪ್ರತಿಯೊಬ್ಬ ಬಡವರಿಗೂ ಸೂರು ಕೊಡಬೇಕೆನ್ನುವುದು.  2021ರ ಅಂತ್ಯದೊಳಗೆ ಮಾಡಬೇಕೆಂದು ಸೂಚನೆ ಕೊಟ್ಟಿದ್ದಾರೆ. ನಾವು ಕೂಡ ಕಾಲಮಿತಿಯೊಳಗಡೆ ಎಷ್ಟರಮಟ್ಟಿಗೆ ಆದ್ಯತೆ ಕೊಡಬೇಕೋ ಕೊಡತಕ್ಕ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಮೂಲಭೂತ ಸೌಕರ್ಯ ಸರಿಯಿದ್ದರೆ ಆಶ್ರಯ ಮನೆಗಳಿಗೆ ಜನ ಬಂದೇ ಬರುತ್ತಾರೆ. ಸೌಕರ್ಯ ಇಲ್ಲದ ಕಡೆ ಜನ ಬರುತ್ತಿಲ್ಲ. ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡದಿದ್ದಾಗ ಈ ರೀತಿ ಆಗುತ್ತದೆ. ಹಿಂದೆ ಈ ರೀತಿ ಅಧಿಕಾರಿಗಳು ಬೇಜವಬ್ದಾರಿ ತೋರಿದ ಕಾರಣ ಮನೆಗಳು ಖಾಲಿ ಇವೆ‌.ಇದನ್ನು ಸರಿಪಡಿಸಿ ಮುಂದೆ ಕಟ್ಟುವ ಮನೆಗಳಿಗೆ ವ್ಯವಸ್ಥಿತ ಸೌಕರ್ಯಗಳ ಕಲ್ಪಿಸುತ್ತೇವೆ. ನೆರೆ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸುವ ಕಾರ್ಯ ಆದ್ಯತೆ ಮೇರೆಗೆ ಸಾಗಿದೆ. ಮಾಧ್ಯಮದವರು ಒಂದು ಪ್ರಕರಣ ಹಿಡಿದು ನಾವು ನೂರು ಒಳ್ಳೆಯ ಕೆಲಸ ಮಾಡಿದರೂ ಒಂದು ತಪ್ಪಾಗಿದ್ದರೆ ಅದನ್ನು ಹಿಡಿದು ಎಳೆದಾಡುತ್ತೀರಿ. ಮನೆ ಕಟ್ಟುವ ವಿಚಾರದಲ್ಲಿ ನಮ್ಮ ಬದ್ಧತೆ ಸದಾ ಇರುತ್ತದೆ ಎಂದರು.

ಈ ಸಂದರ್ಭ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸೇರಿದಂತೆ ಹಲವರು ಸಚಿವರ ಜೊತೆಗಿದ್ದರು.

ಇದಕ್ಕೂ ಮುನ್ನ ‌ ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ   ನಾಡ ಅಧಿದೇವತೆ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದರು. ಈ ಸಂದರ್ಭ ಮಾತನಾಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಧನ್ಯನಾದೆ. ಸರ್ವರಿಗೂ ನಾಡ ಅಧಿದೇವತೆ ಒಳಿತು‌ ಮಾಡಲಿ ಎಂದು ಹಾರೈಸಿದರು.  ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಜೊತೆಗಿದ್ದರು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: