ಕರ್ನಾಟಕಪ್ರಮುಖ ಸುದ್ದಿಮೈಸೂರು

2023ರಲ್ಲೂ ಸಿಎಂ ಬಸವರಾಜ ಬೊಮ್ಮಾಯಿಯವರೇ ಸಿಎಂ ಆಗಿರುತ್ತಾರೆ : ಸಂಸದ ಪ್ರತಾಪಸಿಂಹ ವಿಶ್ವಾಸ

ಮೈಸೂರು,ಅ.7:- ಮಾದರಿ ಆಡಳಿತವನ್ನು ನಡೆಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2023ರಲ್ಲೂ ಸಿಎಂ ಆಗಿಯೇ ಬಂದು ಬಂದು ದಸರಾ ಉದ್ಘಾಟನೆಯಲ್ಲಿ ಭಾಗವಹಿಸುತ್ತಾರೆಂಬ ವಿಶ್ವಾಸವನ್ನು ಸಂಸದ ಪ್ರತಾಪ್ ಸಿಂಹ ವ್ಯಕ್ತಪಡಿಸಿದರು.

ಅವರಿಂದು ಚಾಮುಂಡಿಬೆಟ್ಟದಲ್ಲಿ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ದ್ವೇಷ, ಅಸೂಯೆ, ಸಣ್ಣತನ ತುಂಬಿರುವಂತಹ ರಾಜಕಾರಣದಲ್ಲಿ ಎಸ್ ಎಂ ಕೃಷ್ಣ ಅವರನ್ನು ಕರೆದು ದಸರಾ ಉದ್ಘಾಟನೆ ಮಾಡುವ ಮೂಲಕ ರಾಜ್ಯಕ್ಕೆ ಒಂದು ಒಳ್ಳೆಯ ಸಂದೇಶವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.  ಅದರಲ್ಲೂ ಈ ಒಂದು ಸಂಸ್ಥಾನವನ್ನು ಆಳಿ ಬೆಳಗಿದ  ಮೈಸೂರು ಮಹಾರಾಜರು ಆರಂಭಿಸಿದ ದಸರಾ ಉದ್ಘಾಟನೆಯನ್ನು ಅವರ ಕೈಲಿ ಮಾಡಿಸಿದ್ದಾರೆಂದರೆ ಮುಂದಿನ ದಿನಗಳಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಅಭಿವೃದ್ಧಿ ಪರ್ವ ಎನ್ನುವುದು ಆರಂಭವಾಗಲಿದೆ ಎನ್ನುವುದಕ್ಕೆ ಯಾರಿಗೂ ಅನುಮಾನ ಬೇಡ ಎಂದರು.

2023ರಲ್ಲಿ ಕೂಡ ನೀವೇ ಮತ್ತೆ ಮುಖ್ಯಮಂತ್ರಿಯಾಗಿ ಬಂದು ಈ ದಸರಾವನ್ನು ಉದ್ಘಾಟನೆ ಮಾಡಿಕೊಡುತ್ತೀರಿ ಆ ತಾಯಿ ಚಾಮುಂಡೇಶ್ವರಿ ಅವಕಾಶ ಮಾಡಿಕೊಡುತ್ತಾಳೆಂದು ಆತ್ಮವಿಶ್ವಾಸದಿಂದ ನಂಬಿಕೆಯಿಂದ ಹೇಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ರಾಜಕಾರಣದಲ್ಲಿ ಅಧಿಕಾರ ಬಂದ ನಂತರ ಯಾವ ರೀತಿ ನಡೆದುಕೊಳ್ಳಬೇಕು. ಯಾವ ರೀತಿ ನಡೆದುಕೊಳ್ಳುತ್ತೇವೆ ಎನ್ನುವುದನ್ನು ಜನರು ನೋಡುತ್ತಿರುತ್ತಾರೆ. ಬಸವರಾಜ ಬೊಮ್ಮಾಯಿಯವರು ಬಂದ ಕೂಡಲೇ ಪ್ರಾರಂಭದಲ್ಲೇ ದೀನದಲಿತರ ಬಗ್ಗೆ, ಸಾಮಾನ್ಯಜನರ ಬಗ್ಗೆ ಪಿಂಚಣಿದಾರರ ಬಗ್ಗೆ ಪ್ರೀತಿ ಇಟ್ಟುಕೊಂಡು ಪಿಂಚಣಿಯನ್ನು ಹೆಚ್ಚಿಸಿ ಅದನ್ನು ಘೋಷಣೆ ಮಾಡಿದರು. ನನಗೆ ಹಾರ ತುರಾಯಿ ಕೊಡಬೇಡಿ ಪುಸ್ತಕ ಕೊಡಿ ಅಂದರು. ಇದು ಸಾರಸ್ವತ ಲೋಕದಲ್ಲಿರುವವರಿಗೆ ಎಂತಹ ಒತ್ತನ್ನು ನೀಡಿದೆ ಎಂದರೆ ಸ್ವತಃ ಬರಹಗಾರ ಓದುಗರಾಗಿರುವದರಿಂದ ಇಂತಹ ಒಂದು ಯೋಚನೆ ಅವರಲ್ಲಿ ಬಂತು. ಹಾಗೆ ಝೀರೋ ಟ್ರಾಪಿಕ್ ಬಗ್ಗೆ ಮಾತನಾಡಿದರು. ಪ್ರತಿಯೊಂದು ಕೆಲಸದಲ್ಲೂ ಜನಕ್ಕೆ ಅಪ್ಯಾಯಮಾನವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ವಿಧಾನಸೌಧದಲ್ಲಿ ನೋಡಿದಾಗ ಏಕವಚನದಲ್ಲಿ ಪರಸ್ಪರ ಹೀಗಳೆಯುವುದು, ದೂಷಣೆ ಮಾಡುವುದನ್ನು ನಾವು ನೋಡಿದ್ದೇವೆ. ಅದೇ ರೀತಿ ಮುಖ್ಯಮಂತ್ರಿಗಳಾದವರು ಲೀಡಿಂಗ್ ಪ್ರಮ್ ಫ್ರಂಟ್ ಅನ್ನೋ ರೀತಿಯಲ್ಲಿ ಇರಲಿಲ್ಲ, ಆದರೆ ಈ ಬಾರಿ ನಾವು ಅಧಿವೇಶನ ನೋಡಿದಾಗ ಮುಖ್ಯಮಂತ್ರಿಗಳೇ ಮುಂದೆ ನಿಂತು ಮಾತನಾಡಿದ್ದಾರೆ. ಕುಮಾರವ್ಯಾಸನ ಬಗ್ಗೆ ವಿರೋಧ ಪಕ್ಷದವರು ಹೇಳಿದರೆ ಅದೇ ಕುಮಾರವ್ಯಾಸನ ಕುರಿತು  ಉದಾಹರಣೆ ನೀಡಿ ತೆರಿಗೆ ಸಂಗ್ರಹಣೆ ಕುರಿತು ಹೂವಿನ ಎಸಳಿಗೆ ತೊಂದರೆಯಾಗದ ಹಾಗೆ ಯಾವ ರೀತಿ ಮಧುವನ್ನು ಹೀರಬೇಕು ಅನ್ನೋದರ ಬಗ್ಗೆಯೂ ಹೇಳಿದರು. ಜನರಿಗೆ ತೊಂದರೆಯಾಗದ ಹಾಗೆ ಅಭಿವೃದ್ಧಿಕಾರ್ಯಗಳು ನಡೆಯಬೇಕು, ಬೆಳವಣಿಗೆಯೂ ಆಗಬೇಕು ಎಂದು ಹೇಳಿದರು. ವೈಯುಕ್ತಿಕವಾಗಿಯೂ ನನಗೆ ಸಂತಸವಿದೆ. ಸ್ವಾರ್ಥದಿಂದ ಮುಖಸ್ತುತಿಯಿಂದ ಹೇಳುತ್ತಿಲ್ಲ. ಖಂಡಿತ ನೀವು ಮೈಸೂರಿಗೂ ಒಳ್ಳೆಯದನ್ನು ಮಾಡುವಿರೆಂದು ವಿಶ್ವಾಸವಿದೆ. ನಿನ್ನೆಯೂ ಕೂಡ ನೀವು ಬಂದಾಗ ಮೈಸೂರು ಏರ್ ಪೋರ್ಟ್ ವಿಸ್ತರಣೆಗೆ ಸಹಾಯ ಮಾಡುವುದಾಗಿ ಹೇಳಿದ್ದೀರಿ ನನಗೆ ಅದರಲ್ಲಿ ಯಾವ ಅನುಮಾನವೂ ಇಲ್ಲ, ನಿಮ್ಮ ನೇತೃತ್ವದಲ್ಲಿ ಅಭಿವೃದ್ಧಿ ಇದೇ ರೀತಿ ಮುಂದುವರಿಯಲಿ ಎಸ್.ಎಂ ಕೃಷ್ಣ ಅವರ ನಂತರ ಆ ರೀತಿಯ ಸಮಚಿತ್ತ, ಸಮಭಾವ ಉದ್ವೇಗದ ವಾತಾವರಣ ಇದ್ದರೂ ಕೂಡ ಒಂದು ಕ್ಷಣವೂ ವಿಚಲಿತರಾಗದೆ ನಿಭಾಯಿಸುವ ರೀತಿ ಇದೆಯಲ್ಲ ಅದು ನಿಜಕ್ಕೂ ಜನರಿಗೆ ಇಷ್ಟವಾಗುತ್ತಿದೆ. ನಿಮ್ಮ ನಡತೆಯೂ ಇಷ್ಟವಾಗುತ್ತಿದೆ. ದೇವಸ್ಥಾನದ ವಿಚಾರದಲ್ಲೂ ಎಷ್ಟು ಸಂವೇದನೆಯಿಂದ ಅದನ್ನು ನಿಭಾಯಿಸಿದ್ದೀರಿ. ದೇವಸ್ಥಾನಗಳ ರಕ್ಷಣೆಗೆ ಬಿಲ್ ತಂದಿದ್ದೀರಿ. ಇದು ಧಾರ್ಮಿಕ ಭಾವನೆಯ ಜೊತೆ ಇರಿಸಿಕೊಂಡಿರುವ ಸಂವೇದನೆಯನ್ನು ತೋರಿಸತ್ತೆ. ಪತ್ನಿಯನ್ನೂ ಕರೆದುಕೊಂಡು ಬಂದು ಕೌಟುಂಬಿಕ ವಿಚಾರದಲ್ಲೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದೀರಿ, ಇದೇ ರೀತಿ ರಾಜ್ಯಕ್ಕೆ ಮಾದರಿಯಾಗಿ ರಾಜ್ಯವನ್ನು ಮುನ್ನಡೆಸಿ ನಾಡದೇವತೆ ಚಾಮುಂಡಿತಾಯಿ ನಿಮಗೆ ಆ ಶಕ್ತಿ ನೀಡಲಿ ಎಂದು ಹಾರೈಸಿದರು.

Leave a Reply

comments

Related Articles

error: