ಕರ್ನಾಟಕನಮ್ಮೂರುಪ್ರಮುಖ ಸುದ್ದಿಮೈಸೂರು

ಬಿಕೋ ಎನ್ನುತ್ತಿರುವ ವಸ್ತು ಪ್ರದರ್ಶನ ಮೈದಾನ

ದಸರಾ ವಸ್ತು ಪ್ರದರ್ಶನ ಮೈದಾನಕ್ಕೆ ವಿವಿಧ ರೀತಿಯ ಮಳಿಗೆಗಳನ್ನು ನೋಡಲು ಆಗಮಿಸಿದ ಜನರಿಗೆ ನಿರಾಸೆ ಕಾದಿತ್ತು. ಯಾಕೆಂದರೆ ಅಲ್ಲಿ ಕೇವಲ ಮೂರೇ ಮೂರು ಮಳಿಗೆಗಳು ಮಾತ್ರ ತೆರೆದುಕೊಂಡಿದ್ದು ಉಳಿದೆಡೆ ಬಿಕೋ ಎನ್ನುತ್ತಿತ್ತು. ವಸ್ತು ಪ್ರದರ್ಶನದಲ್ಲಿ 143 ಮಳಿಗೆಗಳು ತೆರೆದುಕೊಳ್ಳಲಿವೆ ಎಂದು ಹೇಳಲಾಗಿತ್ತು. ಆದರೆ ಈಗ ಕೇವಲ ಐದು ಮಳಿಗೆಗಳು ಮಾತ್ರ ತೆರೆದುಕೊಂಡಿದೆ.

ಶನಿವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಸ್ತು ಪ್ರದರ್ಶನ ಮೈದಾನವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಶಾಸಕ ಎಂ.ಕೆ.ಸೋಮಶೇಖರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕಳೆದ ವರ್ಷವೂ ಇದೇ ರೀತಿ ಆಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಈ ರೀತಿ ಆಗದಂತೆ ಎಚ್ಚರಿಸಿದ್ದರು. ಆದರೆ ಈ ಬಾರಿಯೂ ಮಳಿಗೆಗಳ ಕೊರತೆ ಎದ್ದು ಕಾಣುತ್ತಿದ್ದು ಪ್ರವಾಸಿಗರನ್ನು ನಿರಾಸೆಗೆ ನೂಕಿದೆ.

Leave a Reply

comments

Related Articles

error: