ಕರ್ನಾಟಕಪ್ರಮುಖ ಸುದ್ದಿ

ತಪ್ಪು ಯಾರೇ ಮಾಡಿದ್ರೂ ತಪ್ಪೇ ಐಟಿ ದಾಳಿ ಕುರಿತು ಸಚಿವ ಈಶ್ವರಪ್ಪ ಪ್ರತಿಕ್ರಿಯೆ

ರಾಜ್ಯ(ಬಾಗಲಕೋಟ)ಅ.8:- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಆಪ್ತನ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಕೆ.ಎಸ್ ಈಶ್ವರಪ್ಪ, ತಪ್ಪು ಯಾರೇ ಮಾಡಿದ್ದರೂ ಅದು ತಪ್ಪೇ. ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ತಪ್ಪು ಮಾಡಿಲ್ಲ ಅಂದರೆ ಹೊರ ಬರುತ್ತಾರೆ ಎಂದಿದ್ದಾರೆ.

ಬಾಗಲಕೋಟೆಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಬಿಎಸ್ ವೈ ಅವರೇ ನನ್ನ ಆಪ್ತ ಎಂದಿದ್ದಾರೆ. ದಾಳಿ ಆಗಿದೆ ಅಂದರೆ ತಪ್ಪು ಮಾಡಿದ್ದಾರೆ ಅಂತ ಅಲ್ಲ. ಬಿಎಸ್ ವೈ ಬಗ್ಗೆ ಅನುಮಾನ ಪಡೋದು ಸರಿಯಲ್ಲ ಎಂದಿದ್ದಾರೆ.

ಕಾಂಗ್ರೆಸ್  ನಾಯಕರನ್ನು ಮಾತ್ರ   ಗುರಿಯಾಗಿಸಿ ಐಟಿ ದಾಳಿ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಕಾಂಗ್ರೆಸ್ ಮೇಲಷ್ಟೇ ಐಟಿ ದಾಳಿ ಮಾಡುತ್ತಾರೆ ಎಂದಿದ್ದರು.  ಈಗ್ಯಾಕೆ ಮಾತನಾಡುತ್ತಿಲ್ಲ. ಯಾರೇ ಆದರೂ ತಪ್ಪು ಮಾಡಿದರೆ ಕ್ರಮ ಕೈಗೊಳ್ಳುತ್ತಾರೆ. ಇಲ್ಲ ಅಂದರೆ ಇಲ್ಲ. ಯಾರ ಮೇಲೆ ಅನುಮಾನ ಬರುತ್ತೋ ಅವರ ಮೇಲೆ ದಾಳಿ ಮಾಡುತ್ತಾರೆ. ಇದಕ್ಕೆ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿ ದಾಳಿ ಎನ್ನೋದು ಸರಿಯಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: