
ಕರ್ನಾಟಕಪ್ರಮುಖ ಸುದ್ದಿ
ಜಾತಿ ಮೇಲೆ ಯಾರನ್ನೂ ಬೆಳೆಸಿಲ್ಲ, ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಬೆಂಗಳೂರು,ಅ.8- ನಾನು ಜಾತಿ ಮೇಲೆ ಯಾರನ್ನೂ ಬೆಳೆಸಿಲ್ಲ. ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ. ನಮ್ಮ ಅಭ್ಯರ್ಥಿ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ಎರಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಿರುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಬಸವಕಲ್ಯಾಣದಲ್ಲಿ ನಾರಾಯಣರಾವ್ ನನ್ನ ಶಿಷ್ಯ ಆವರನ್ನು ಜಾತಿ ಮೇಲೆ ಬೆಳೆಸಲಿಲ್ಲ. ಬಸವಕಲ್ಯಾಣದಲ್ಲಿ 50 ಸಾವಿರ ಮುಸ್ಲೀಮರಿದ್ದಾರೆ. ಅದಕ್ಕೆ ಅನಿವಾರ್ಯ ಕಾರಣದಿಂದ ಅವರನ್ನು ನಿಲ್ಲಿಸಬೇಕಾಯಿತು. ನಾನು ಜಾತಿ ಮೇಲೆ ಯಾರನ್ನೂ ಬೆಳೆಸಿಲ್ಲ. ಸಿಂಧಗಿಯಲ್ಲಿ ಎಂ.ಸಿ.ಮನಗೂಳಿಗೆ ನಾನೇ ಟಿಕೆಟ್ ಕೊಡಿಸಿದ್ದೆ. ಅವರ ವಿರುದ್ಧ ಕಾಗ್ರೆಸ್ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿದರು. ಆಗ ಮನಗೂಳಿಯನ್ನು ಗೆಲ್ಲಿಸಿಕೊಂಡು ಬಂದೆ. ಸಿಂದಗಿಗೆ ಕುಡಿಯುವ ನೀರು ಕೊಡಿಸಿದ್ದಕ್ಕೆ ನನ್ನ ಪ್ರತಿಮೆ ಮಾಡಿಸಿದರು. ನಾವು ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ. ನಮ್ಮ ಅಭ್ಯರ್ಥಿ ಗೆಲ್ಲಿಸಿಕೊಡಿ ಎಂದು ಕೇಳಿದ್ದೇನೆ ಎಂದರು.
ಮುಸ್ಲೀಮರನ್ನೇನು ಇವರು ಗುತ್ತಿಗೆ ಪಡೆದಿದ್ದಾರಾ? ಕಾಂಗ್ರೆಸ್ ನವರು ಎಷ್ಟು ಜನ ಮುಸ್ಲೀಮರಿಗೆ ಅವಕಾಶ ಕೊಟ್ಟಿದ್ದಾರೆ, ರೆಹಮಾನ್ ಖಾನ್ ಏನಾದರು? ಎಲ್ಲದರ ಬಗ್ಗೆಯೂ ಚರ್ಚೆಯಾಗಲಿ ನಾನು ವಿಜಯಪುರದಲ್ಲಿ ಇರುತ್ತೇನೆ. ಜೆಡಿಎಸ್ ಅನ್ನು ಮುಗಿಸಲು ಪ್ರಯತ್ನ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.
ರಾಮನಗರ ಮಂಡ್ಯ, ಹಾಸನದಲ್ಲಿ ಸರಿಯಾದ ಮುಸ್ಲಿಂ ಅಭ್ಯರ್ಥಿಗಳು ಸಿಕ್ಕಿಲ್ಲ. ಹಾಗಾಗಿ ಅವರನ್ನು ಎಂಎಲ್ ಸಿ ಮಾಡಿದ್ದೇವು. ಸಿದ್ದರಾಮಯ್ಯ ಅವರನ್ನು ಕೇಳಿ ಮಾಡಿಲ್ಲ. ಇಬ್ರಾಹಿಮ್ ಅವರನ್ನು ಕಾಂಗ್ರೆಸ್ ನ ಯೂತ್ ಪ್ರೆಸಿಡೆಂಟ್ ಮಾಡಿದ್ದು ನಾನೇ. ನಾನು ಸಿಎಂ ಆದ ತಕ್ಷಣ ಅವರನ್ನು ರಾಜ್ಯ ಸಭೆಗೆ ನೇಮಕ ಮಾಡಿದೆ. ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಎಲ್ಲಿಗೆ ಬಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.