ಮೈಸೂರು

ಪೊಲೀಸ್ ಮೇಲೆ ಹಲ್ಲೆ ಯತ್ನ: ಬಂಧನ

ಒನ್ ವೇ ನಲ್ಲಿ ಬಂದಿರುವುದನ್ನು ಸಂಚಾರಿ ಪೊಲೀಸ್ ಓರ್ವರು ಪ್ರಶ್ನಿಸಿದ್ದಕ್ಕೆ, ದ್ವಿಚಕ್ರವಾಹನ ಸವಾರನೋರ್ವ ಪೊಲೀಸ್ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.  ಇದೀಗ ಆತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಮಜೀಬ್ ಎಂದು ಗುರುತಿಸಲಾಗಿದೆ. ಈತ ಮೇ.2ರಂದು ರಾತ್ರಿ 8ಗಂಟೆಯ ಸಮಯದಲ್ಲಿ ಮೈಸೂರಿನ ಡಿಪಿಓ ವೃತ್ತದಲ್ಲಿ ಸಂಚಾರಿ ಪೊಲೀಸ್ ಆರ್ಮುಗಂ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ನಜರ್ ಬಾದ್ ಕಡೆಯಿಂದ ಹೊಂಡಾ ಬೈಕ್ ನಲ್ಲಿ  7ರಿಂದ 8ರ ವಯೋಮಾನದ ಐವರು ಮಕ್ಕಳನ್ನು ಕುಳ್ಳಿರಿಸಿಕೊಂಡು  ಒನ್ ವೇ ನಲ್ಲಿ ಬಂದಿದ್ದು ಮಜೀಬ್ ನನ್ನು ಪ್ರಶ್ನಿಸಿದ ಆರ್ಮುಗಂ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದಾನೆ.  ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.  ಸ್ಥಳದಲ್ಲಿದ್ದ ಸಾರ್ವಜನಿಕರು ಇಬ್ಬರ ಜಗಳವನ್ನು ಬಿಡಿಸಿದ್ದಾರೆ. ಇದರಿಂದ ಆರ್ಮುಗಂ ನಜರ್ ಬಾದ್ ಠಾನೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಲಾಗಿದೆ ಎಂದು ದೂರು ದಾಖಲಿಸಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: