ಮೈಸೂರು

ಕ್ಷೇತ್ರದ ಜನತೆಗೆ ಸ್ವಂತ ಸೂರು ಕೊಡುವ ಜವಾಬ್ದಾರಿ ನಮ್ಮದಿದೆ : ರಾಮದಾಸ್

ಮೈಸೂರು, ಅ.9:- ಭಾರತೀಯ ಜನತಾ ಪಾರ್ಟಿ ರಾಜ್ಯ ಘಟಕದಿಂದ ಬಂದಿರುವ ನಿರ್ದೇಶನದಂತೆ ಇಂದು ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ನಂ 65 ರ ಬೂತ್ ಅಧ್ಯಕ್ಷರ ಮನೆಯ ಮೇಲೆ ಬಿಜೆಪಿ ಧ್ವಜ ಕಟ್ಟುವ ಹಾಗೂ ನಾಮಫಲಕ ಅಳವಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ವಾರ್ಡ್ ನಂ 65 ರ ಎಲ್ಲಾ ಬೂತ್ ಅಧ್ಯಕ್ಷರ ಮನೆಗಳಿಗೆ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್ ಖುದ್ದಾಗಿ ಭೇಟಿ ನೀಡಿದರು.

ಭಾರತಾಂಬೆ ಪಟಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ  ಶಾಸಕರು
ಬೂತ್ ಅಧ್ಯಕ್ಷರುಗಳು ಇಂದು ನಾನು ದೇಶಕ್ಕೋಸ್ಕರ ಕೆಲಸ ಮಾಡುತ್ತೇನೆ, ಸರ್ಕಾರದ ಯೋಜನೆಗಳನ್ನು ಮನೆಗಳಿಗೆ ತಲುಪಿಸುತ್ತೇನೆ ಎಂದು ಪ್ರಮಾಣ ಮಾಡಿದ್ದಾರೆ. 2.26 ಲಕ್ಷ ಜನಕ್ಕೆ ಕೆ.ಆರ್ ಕ್ಷೇತ್ರದಲ್ಲಿ ವ್ಯಾಕ್ಸಿನ್ ನೀಡಲಾಗಿದೆ ಇದು ರಾಜ್ಯದಲ್ಲೇ ಮೊದಲಾಗಿದೆ ಎಂಬುದು ಹೆಮ್ಮೆಯ ವಿಷಯ. ಆಗಸ್ಟ್ 15 2021 ರಿಂದ ಆಗಸ್ಟ್ 2022 ರ ಒಳಗೆ ಸ್ವರ್ಣ ಕೆ.ಆರ್ ಅನ್ನಾಗಿ ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ. ನನ್ನ ತಾಯಿ ಹೇಳುತ್ತಿದ್ದರು ಏನು ಕೊಡದೇ ಇದ್ದರೂ ಪರವಾಗಿಲ್ಲ ಬಾಡಿಗೆ ಮನೆಯಲ್ಲಿರುವವರಿಗೆ ಸ್ವಂತ ಮನೆ ಕೊಡುವಂತಹ ಕೆಲಸ ಮಾಡಬೇಕು ಎಂದು. ಆ ನಿಟ್ಟಿನಲ್ಲಿ ಕ್ಷೇತ್ರದ ಜನತೆಗೆ ಸ್ವಂತ ಸೂರು ಕೊಡುವ ಜವಾಬ್ದಾರಿ ನಮ್ಮದಿದೆ. ಪೇಜ್ ಪ್ರಮುಖರು ತಮಗೆ ಬರುವ 8,10 ಮನೆಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು, ಸಾಮಾಜಿಕ ಭದ್ರತೆಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು, ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತೀ ಮನೆಗಳಿಗೆ ತಲುಪಿಸಬೇಕು, ಸೂರ್ಯ ಪಥ್ ಯೋಜನೆಯಡಿಯಲ್ಲಿ ಮನೆಯ ಮೇಲೆ ಸೌರ ಶಕ್ತಿ ಉತ್ಪಾದಿಸಿ ಗ್ರಿಡ್ ಗೆ ನೀಡುವ ಮೂಲಕ ಹಣವುಳಿಸಬಹುದಾದ ಯೋಜನೆಯ ಬಗ್ಗೆ ಪ್ರತಿ ಮನೆಗೆ ಮಾಹಿತಿ ಒದಗಿಸಬೇಕು, ಕೋವಿಡ್ ನಿಂದ ಮೃತರಾದವರ ವಿವರವನ್ನು ಸಂಗ್ರಹಿಸಿ ಸರ್ಕಾರದಿಂದ ಬರುವ 1.5 ಲಕ್ಷ ಹಾಗೂ 50 ಸಾವಿರ ರೂ ಗಳ ಧನಸಹಾಯಕ್ಕೆ ಅರ್ಜಿ ಹಾಕಬೇಕು, ಸಾರ್ವಜನಿಕರ ಕಷ್ಟ ಸುಖದಲ್ಲಿ ಭಾಗಿಯಾಗಬೇಕು ಇದು ಮುಖ್ಯ ಧ್ಯೇಯ ಹಾಗಾಗಿ ನಾವೆಲ್ಲ ಒಟ್ಟಿಗೆ ಸೇರಿ ದೇಶದ ಏಳಿಗೆಗಾಗಿ ಶ್ರಮಿಸೋಣ ಎಂದು ಹೇಳಿದರು.
ವಾರ್ಡ 65 ರ ದೇವಯ್ಯನಹುಂಡಿಯಲ್ಲಿರುವ ಸಿದ್ಧಪ್ಪಾಜಿ ದೇವಸ್ಥಾನದ ಹೆಬ್ಬಾಗಿಲು ನಿರ್ಮಿಸುವ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಒಳಚರಂಡಿಗೆ ಸಂಬಂಧಪಟ್ಟಂತೆ ಒಳಚರಂಡಿ ಕಾಮಗಾರಿಗೆ ಶ್ರೀರಾಂಪುರ 2ನೇ ಕ್ರಾಸ್ ನಲ್ಲಿ ಗುದ್ದಲಿ ಪೂಜೆ ಹಾಗೂ ಶ್ರೀರಾಂಪುರ ವಾಟರ್ ಟ್ಯಾಂಕ್ ವೃತ್ಥದಲ್ಲಿ ಪೌರ ಕಾರ್ಮಿಕರಿಗೆ ನಿರ್ಮಿಸಿರುವ ಪೌರಭಂದು ವಿಶ್ರಾಂತಿ ಗೃಹ ಉದ್ಘಾಟಿಸಲಾಯಿತು

ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಗರಪಾಲಿಕಾ ಸದಸ್ಯರಾದ ಗೀತಶ್ರೀ ಯೋಗನಂದ್, ಕ್ಷೇತ್ರದ ಭಾಜಪಾ ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರ, ಓಂಶ್ರೀನಿವಾಸ್, ಬಿಎಲ್ಎ-1 ಪ್ರಸಾದ್ ಬಾಬು, ಉಪಾಧ್ಯಕ್ಷರಾದ ರವಿ, ಕಾರ್ಯದರ್ಶಿಗಳಾದ ಗಿರೀಶ್ ಗೌಡ,ಪೇಜ್ ಪ್ರಮುಕ್ ಸಂಚಾಲಕರಾದ ನೂರ್ ಫಾತಿಮಾ, ವಾರ್ಡ್ ಅಧ್ಯಕ್ಷರಾದ ಸತೀಶ್ ಕುಮಾರ್.ಎಂ, ಮುರುಳಿ, ಹೇಮಂತ್ ಕುಮಾರ್, ಬೂತ್ ಅಧ್ಯಕ್ಷರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: