ದೇಶಪ್ರಮುಖ ಸುದ್ದಿ

ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್: ಇಬ್ಬರು ಉಗ್ರರ ಹತ್ಯೆ, ಪೊಲೀಸ್ ಗೆ ಗಾಯ

ಶ್ರೀನಗರ,ಅ.11- ಜಮ್ಮು-ಕಾಶ್ಮೀರದಲ್ಲಿ ಇಂದು ನಸುಕಿನ ಜಾವ ಭಾರತೀಯ ಭದ್ರತಾ ಪಡೆ ನಡೆಸಿದ ಪ್ರತ್ಯೇಕ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.

ಜಮ್ಮು-ಕಾಶ್ಮೀರದ ಬಂಡಿಪೊರಾ ಮತ್ತು ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಪೊಲೀಸರೊಬ್ಬರಿಗೆ ಗಾಯವಾಗಿದೆ. ಶೋಧಕಾರ್ಯ ಮುಂದುವರಿದಿದೆ ಎಂದು ಜಮ್ಮು-ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಬಂಡಿಪೋರಾ ಜಿಲ್ಲೆಯ ಹಜಿನ್ ಪ್ರದೇಶದ ಗುಂಡ್ಜಹಾಂಗೀರ್ ನಲ್ಲಿ ನಡೆದ ಎನ್ಕೌಂಟರ್ ನಲ್ಲಿ, ಲಷ್ಕರ್-ಎ-ತೊಯ್ಬಾ ಉಗ್ರನನ್ನು ಕೊಲ್ಲಲಾಯಿತು. ಹತ್ಯೆಗೀಡಾದ ಭಯೋತ್ಪಾದಕನನ್ನು ಇಮ್ತಿಯಾಜ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್‌ಇಟಿ (ಟಿಆರ್‌ಎಫ್) ಗೆ ಸಂಬಂಧಿಸಿದೆ.

ಇತ್ತೀಚೆಗೆ ಶಹಗುಂಡ್ ಬಂಡಿಪೋರಾದಲ್ಲಿ ನಡೆದ ನಾಗರಿಕ ಹತ್ಯೆಯಲ್ಲಿ ಭಾಗಿಯಾಗಿದ್ದನು ಎಂದು ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್, ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು ಅನಂತ್ ನಾಗ್ ಜಿಲ್ಲೆಯ ವೆರಿನಾಗ್ ಪ್ರದೇಶದ ಖಗುಂದ್ ನಲ್ಲಿ ಭಯೋತ್ಪಾದಕರು ಅಡಗಿರುವ ಮಾಹಿತಿ ಮೇರೆಗೆ ಪ್ರದೇಶ ಸುತ್ತುವರಿದು ಶೋಧಕಾರ್ಯ ಪ್ರಾರಂಭಿಸಿದರು.

ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್ಕೌಂಟರ್ ಆಗಿ ಬದಲಾಯಿತು, ಅವರು ಪ್ರತಿದಾಳಿ ನಡೆಸಿದರು. ಒಬ್ಬ ಉಗ್ರನನ್ನು ಹತ್ಯೆಗೈದರೆ, ಒಬ್ಬ ಪೊಲೀಸ್ ಗಾಯಗೊಂಡರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: