ಕರ್ನಾಟಕಪ್ರಮುಖ ಸುದ್ದಿ

ಕೊರೊನಾ: ರಾಜ್ಯದಲ್ಲಿ 406 ಪ್ರಕರಣ ವರದಿ; 10 ಮಂದಿ ಸಾವು

ಬೆಂಗಳೂರು,ಅ.11-ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 406 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದಾಗಿ 10 ಮಂದಿ ಸಾವನ್ನಪ್ಪಿದ್ದಾರೆ.

ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸೋಂಕಿತರ ಸಂಖ್ಯೆ 29,81,027ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 37,885 ತಲುಪಿದೆ.

ಇದೇ ವೇಳೆ ಸೋಂಕಿನಿಂದ ಗುಣಮುಖರಾಗಿ 637 ಡಿಸ್ಚಾರ್ಜ್ ಆಗಿದ್ದು, ಈವರೆಗೆ 29,32,959 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇನ್ನು 10,154 ಸಕ್ರಿಯ ಪ್ರಕರಣಗಳಿವೆ.

ಬಾಗಲಕೋಟೆ 2, ಬಳ್ಳಾರಿ 4, ಬೆಳಗಾವಿ 5, ಬೆಂಗಳೂರು ಗ್ರಾಮಾಂತರ 5, ಬೆಂಗಳೂರು ನಗರ 156, ಚಾಮರಾಜನಗರ 2, ಚಿಕ್ಕಮಗಳೂರು 11, ಚಿತ್ರದುರ್ಗ 2, ದಕ್ಷಿಣಕನ್ನಡ 38, ದಾವಣಗೆರೆ 4, ಧಾರವಾಡ 7, ಹಾಸನ 32, ಕೊಡಗು 9, ಕೋಲಾರ 4, ಮಂಡ್ಯ 11, ಮೈಸೂರು 56, ರಾಯಚೂರು 1, ರಾಮನಗರ 3, ಶಿವಮೊಗ್ಗ 11, ತುಮಕೂರು 13, ಉಡುಪಿ 18, ಉತ್ತರಕನ್ನಡ 12 ಪ್ರಕರಣ ವರದಿಯಾಗಿದ್ದು, ಬೀದರ್, ಚಿಕ್ಕಬಳ್ಳಾಪುರ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿಯಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ. (ಎಂ.ಎನ್)

Leave a Reply

comments

Related Articles

error: