ಮೈಸೂರು

ಬಿ.ಇ.ಎಂ.ಎಲ್ ಗೆ ಸಂಸದ ಪ್ರತಾಪ್ ಸಿಂಹ ಭೇಟಿ

ಮೈಸೂರು, 4: ಬಿ.ಇ.ಎಂ.ಎಲ್ ಖಾಸಗೀಕರಣವನ್ನು ವಿರೋಧಿಸಿ ಬಿ.ಇ.ಎಂ.ಎಲ್‍ ನೌಕರರ ಜಂಟಿ ಸಮಿತಿ ಹಾಗೂ ಕಾರ್ಯನಿರ್ವಾಹಕರು ಹಲವು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಗುರುವಾರ ಸಂಸದ ಪ್ರತಾಪ್ ಸಿಂಹ ಬಿಇಎಂಎಲ್ ಕಚೇರಿಗೆ ತೆರಳಿ ಸಭೆ ನಡೆಸಿದರು.

ಬಿಇಎಂಎಲ್ ಖಾಸಗೀಕರಣಗೊಂಡರೆ  ನೌಕರರಿಗೆ  ಏನೆಲ್ಲ ಸಮಸ್ಯೆಗಳಾಗಲಿವೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದರು.  ನೌಕರರು ತಮಗಾಗುತ್ತಿರುವ ತೊಂದರೆಗಳನ್ನು ಸಂಸದರಿಗೆ ವಿವರಿಸಿದರು. ಈ ವಿಷಯವನ್ನು ಸಂಬಂಧಪಟ್ಟ ಸಚಿವರಿಗೆ ಮನವರಿಕೆ ಮಾಡಿಕೊಡುವುದಾಗಿ ಸಂಸದರು ನೌಕರರಿಗೆ ಭರವಸೆ ನೀಡಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: