ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಕಿರುತೆರೆ ಹಿರಿತೆರೆಯ ಹಿರಿಯ ನಟ ಉಮೇಶ್ ಹೆಗಡೆ ನಿಧನ

ರಾಜ್ಯ( ಬೆಂಗಳೂರು),ಅ.11:- ಕನ್ನಡ ಚಿತ್ರರಂಗದ ಹಾಗೂ ಕಿರುತೆರೆಯ ಹಿರಿಯ ಕಲಾವಿದ ಉಮೇಶ್ ಹೆಗಡೆ ಇಂದು ನಿಧನ ಹೊಂದಿದ್ದಾರೆ.

ಅವರಿಗೆ 71ವರ್ಷ ವಯಸ್ಸಾಗಿತ್ತು.  ಹೃದಯಾಘಾತದ ಕಾರಣದಿಂದ ನಿನ್ನೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ. ಉಮೇಶ್ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಇಡಲಾಗಿದೆ. ಕುಟುಂಬ ಸದಸ್ಯರ ಹಾಗೂ ಸ್ನೇಹಿತರ ಅಂತಿಮ ದರ್ಶನದ ಬಳಿಕ ಅಂತಿಮ ವಿಧಿವಿಧಾನ ನೆರವೇರಿಸಲಾಗುವುದು ಎಂದು ಹೇಳಲಾಗಿದೆ.
ಕನ್ನಡ ಚಿತ್ರರಂಗದ ಗಣ್ಯರು ಉಮೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಉಮೇಶ್, ಹಲವಾರು ಧಾರಾವಾಹಿಗಳು ಸಹಿತ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು. ಅವರು ರಂಗಭೂಮಿ ಕಲಾವಿದರೂ ಆಗಿದ್ದರು. ಉಮೇಶ್ ಹೆಗಡೆ ಮೂಲತಃ ಉತ್ತರ ಕನ್ನಡ ಜಿಲ್ಲೆ ಶಿರಸಿಯವರು. ಅವರ ನಿಧನ ವಾರ್ತೆಯನ್ನು ಪುತ್ರ ಆದರ್ಶ್ ಹೆಗಡೆ ಸಾಮಾಜಿಕ ಜಾಲತಾಣಗಳಲ್ಲಿ ಖಚಿತಪಡಿಸಿದ್ದಾರೆ.

Leave a Reply

comments

Related Articles

error: