ಮೈಸೂರು

ವಿಶ್ವ ಹಿರಿಯ ನಾಗರಿಕ ದಿನಾಚರಣೆ

2007ರ ಕಾಯಿದೆ ಅನ್ವಯ  ಹಿರಿಯ ನಾಗರಿಕ ಮತ್ತು ಪೋಷಕರ ಪಾಲನೆಗೆ 3೦ ಜಿಲ್ಲೆಯಲ್ಲಿ 31 ಕೇಂದ್ರಗಳನ್ನು ತರೆಯಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಅಲ್ಪ ಸಂಖ್ಯಾತ ಮತ್ತು ವಕ್ಛ್ ಸಚಿವ ತನ್ವೀರ್ ಸೇಠ್ ತಿಳಿಸಿದರು.

ವಿಶ್ವ ಹಿರಿಯ ನಾಗರಿಕ ದಿನಾಚರಣೆ ಅಂಗವಾಗಿ ಶನಿವಾರ ಪ್ಲಾಟಿನಂ ಜ್ಯುಬಿಲಿ ಆಡಿಟೋರಿಯಂ, ಜಿ.ಕೆ. ಗ್ರೌಂಡ್ಸ್‌ನಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಅನಾಥಾಲಯ ಮತ್ತು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮನುಷ್ಯ ಕೇವಲ 5೦ ವರ್ಷ ಮಾತ್ರ ಬದುಕು ಇದ್ದರೆ ಅವನ ತಲೆಯಲ್ಲಿ 5೦೦ ವರ್ಷಗಳಷ್ಟು ಆಸೆ ಆಕ್ಷಾಂಶೆಗಳು ಇರುತ್ತವೆ. ರಕ್ಷಣೆ ಕೊಡುವ ಸಂದರ್ಭದಲ್ಲಿ  ಅನೇಕ ಸಮಸ್ಯೆಗಳನ್ನು ಎದುರಿಸುತ್ತವೆ. ಪೋಲಿಸ್ ಇಲಾಖೆ ಜೊತೆ ಸೇರಿಕೊಂಡು ಒಂಟಿ ಹಿರಿಯ ನಾಗರಿಕರಿಗೆ ಅಭಯ ಅಂತ ಅಂಕಿತ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ. ಹಿರಿಯ ಪಾಲಕರ ರಕ್ಷಣೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನ ಪಡೆದುಕೊಂಡಿದೆ. ಹಿರಿಯರ ದಿನವನ್ನು ಐತಿಹಾಸಿಕ ದಿನವಾಗಿ ಆಚರಿಸೋಣ ಎಂದರು.

ಕಾನೂನು ಕ್ಷೇತ್ರದಿಂದ ಜಸ್ಟಿಸ್ ಎನ್.ಎಸ್. ಪಾಟೀಲ್, ಸಂಗೀತ ಕ್ಷೇತ್ರದಲ್ಲಿ ಶ್ಯಾಮಲ ಜೀ ಬಾವೆ,  ಸಾಹಿತ್ಯ ಕ್ಷೇತ್ರದಲ್ಲಿ ಚನ್ನಪ್ಪ ವಿರುಪಾಕ್ಷ ಕೆರಿಮನಿ,  ಸಮಾಜ ಸೇವೆಯಲ್ಲಿ  ಮೇರಿ ಅಕ್ಕಮ್ಮ ಮಾಮ್ಮನ್, ಕ್ರೀಡಾ ಕ್ಷೇತ್ರದಲ್ಲಿ ಎನ್. ಲಿಂಗಪ್ಪ, ಶಿಕ್ಷಣ ಕ್ಷೇತ್ರದಿಂದ ಕೆ. ಅನುಸೂಯ ಹೊನ್ನಪ್ಪರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ನ್ಯಾಯಧೀಶರು ಕೆ. ಎಸ್. ಮುಂದುಗಲ್, ಹಿರಿಯ ನಾಗರಿಕ ಸಬಲೀಕರಣದ ನಿರ್ದೇಶಕ ಗೋವಿಂದರಾಜು ಉಪಸ್ಥಿತರಿದ್ದರು.

Leave a Reply

comments

Related Articles

error: