ಮೈಸೂರು

ಗುರುದೇವ ನಮೋಸ್ತುತೆ ಕಾರ್ಯಕ್ರಮದಲ್ಲಿ ಸನ್ಮಾನ

ಮೈಸೂರು, ಅ.12:- ನಾಡಹಬ್ಬ ದಸರಾ ನವರಾತ್ರಿ ಸಂದರ್ಭದಲ್ಲಿ ಪ್ರತಿಯೊಂದು ದಿನವು ಶಕ್ತಿ ದೇವತೆ ಆರಾಧನೆ ಮಾಡುವ ಪ್ರತೀಕವಿದ್ದು ಸರಸ್ವತಿ ಪೂಜಾ ದಿನದ ಅಂಗವಾಗಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಗುರುದೇವೋ ನಮಸ್ತುತೆ ಕಾರ್ಯಮವನ್ನು ವಿದ್ಯಾರಣ್ಯಪುರಂನಲ್ಲಿರುವ ಅವನಿ ಶಂಕರ ಮಠದಲ್ಲಿ ಆಯೋಜಿಸಲಾಗಿತ್ತು,

ಈ ವೇಳೆ ವಿದ್ಯೆ ಕಲಿಸಿದ ವಿವಿಧ ಕ್ಷೇತ್ರದ ಗುರುಗಳನ್ನು ಸನ್ಮಾನಿಸಲಾಯಿತು. ನಾಗರಾಜ ಶಾಸ್ತ್ರಿ ಧಾರ್ಮಿಕ ಪುರೋಹಿತರು, ಶ್ರೀನಿವಾಸ ಮೂರ್ತಿ ನಿವೃತ್ತ ಇಂಜಿನಿಯರ್, ಎಂ. ಸುನೀಲ್ ವಕೀಲರು, ರವಿಶಂಕರ್ ಶಿಕ್ಷಕರು, ಎಂ.ಸಿ ಜಯರಾಂ ಯೋಗ ಮತ್ತು ಆಯುರ್ವೇದ, ಡಾ. ಸುನಂದ ಭೂಪಾಳಿ ಜೆ.ಎಸ್.ಎಸ್ ಸಂಸ್ಕೃತ ವಿಭಾಗ ಪ್ರಾಂಶುಪಾಲರು
ಅವರುಗಳನ್ನು ಸನ್ಮಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಹಂಗಾಮಿ ಅಧ್ಯಕ್ಷರಾದ ಡಾ. ವೈಡಿ. ರಾಜಣ್ಣ ರವರು ಮಾತನಾಡಿ ನವರಾತ್ರಿ ಸಂದರ್ಭದಲ್ಲಿ ಮನೆಗಳಲ್ಲಿ ಶಕ್ತಿ ದೇವತೆ ಆರಾಧನೆ ಆಚರಣೆಯೊಂದಿಗೆ ನಮ್ಮ ಯುವ ಪೀಳಿಗೆಗೆ ಇತಿಹಾಸ ಸಂಸ್ಕೃತಿ ಪರಂಪರೆಯ ಮಹತ್ವವನ್ನ ತಿಳಿಸಿಕೊಡಲು ಪೋಷಕರು ಮುಂದಾಗಬೇಕು, ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮಿ, ದುಷ್ಟ ಸಂಹಾರಕ್ಕೆ ಕಾಳಿ ಸೇರಿದಂತೆ ನಾನಾ ಅವತಾರದಲ್ಲಿ  ಆಚರಿಸುತ್ತೇವೆ, ಶಿಕ್ಷಣ ಎಂಬುದು ಬಹುಮುಖ್ಯ ಮನೆಗೊಬ್ಬರು ಶಿಕ್ಷಣ ಪಡೆದು ಪದವೀಧರರಾಗಲು ಮುಂದಾಗಬೇಕು ಎಂದರು,

ಅವನಿ ಶಂಕರ ಮಠದ ಭವಾನಿ ಶಂಕರ್  ಮಾತನಾಡಿ ಶಾಲಾ ಮಕ್ಕಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯ ಪುಸ್ತಕ ಸಾಮಗ್ರಿಗಳ ನ್ನಿಟ್ಟು ಸರಸ್ವತಿ ಪೂಜಾ ಆಚರಿಸಿ ಎಲ್ಲರ ಭವಿಷ್ಯ ಪ್ರಜ್ವಲಿಸಲಿ ಎಂದು ಪ್ರಾರ್ಥಿಸುತ್ತೇವೆ. ಆದರೆ ಶಿಕ್ಷಣ ಪಡೆದ ನಂತರ ಗುರುಗಳನ್ನ ಮರೆಯುತ್ತಿದ್ದೇವೆ. ಸಮಾಜದಲ್ಲಿ ಸಂಸ್ಕಾರ ಮತ್ತು ಶಿಕ್ಷಣ ಬಹುಮುಖ್ಯ ಇದರಿಂದ ಉತ್ತಮ ಸಮಾಜದ ವಾತಾವರಣ ರೂಪಿಸಬಹುದು ಎಂದರು,

ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಕಡಕೊಳ ಜಗದೀಶ್, ಗಣೇಶ್ ರಾವ್, ಯುವ ಮುಖಂಡ ಅಜಯ್ ಶಾಸ್ತ್ರಿ, ಯೋಗ ಅನಂತು, ರಂಗನಾಥ್, ಚಿದಂಬರಂ, ಸುಚೀಂದ್ರ, ಲತಾ ಬಾಲಕೃಷ್ಣ, ವಿಜಯ್ ಕುಮಾರ್, ಚಕ್ರಪಾಣಿ ಇನ್ನಿತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: