ಕರ್ನಾಟಕಪ್ರಮುಖ ಸುದ್ದಿಮೈಸೂರು

ವಿಧಾನ ಪರಿಷತ್ ಚುನಾವಣೆ: ಮತದಾರರ ನೋಂದಣಿಗೆ ಅಗತ್ಯದ ಮಾಹಿತಿ ನೀಡಿದ ಗೋ.ಮಧುಸೂದನ

ಮೈಸೂರು,ಅ.13:- ವಿಧಾನ ಪರಿಷತ್ ಚುನಾವಣೆಯು 2022ರ ಜೂನ್ ನಲ್ಲಿ ನಡೆಯಲಿದ್ದು, ದಕ್ಷಿಣ ಪದವೀಧರ ಕ್ಷೇತ್ರದ ಮತದಾರರ ನೋಂದಣಿ ಅಭಿಯಾನ ಆರಂಭವಾಗಿದೆ.
ಈಗಾಗಲೇ ವಿಧಾನಪರಿತ್ ಮಾಜಿ ಸದಸ್ಯ ಗೋ.ಮಧುಸೂದನ ಅವರು ಮತದಾರರ ಅಧಿಕೃತ ನೋಂದಣಿ ಕಾರ್ಯ ನಡೆಸಿದ್ದಾರೆ. ಮತದಾರರು ತಮ್ಮ ನೋಂದಣಿ ಕುರಿತಂತೆ ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕೆಂಬುದನ್ನು ಅವರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಮತದಾರರು 2018ರೊಳಗೆ ಭಾರತದ ಯಾವುದೇ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದವರಾಗಿರಬೇಕು. ಅವರು ಮೈಸೂರು,ಮಂಡ್ಯ, ಹಾಸನ, ಚಾಮರಾಜನಗರ ಇಲ್ಲಿನ ನಿವಾಸಿಯಾಗಿರಬೇಕು. ಅರ್ಜಿಯಲ್ಲಿ ಕಲರ್ ಅಥವಾ ಬ್ಲ್ಯಾಕ್ ಅಂಡ್ ವೈಟ್ ನ ಪಾಸ್ ಪೋರ್ಟ್ ಸೈಜ್ ಭಾವಚಿತ್ರ ಲಗತ್ತಿಸಬೇಕು. ಪದವಿ ಪ್ರಮಾಣ ಪತ್ರ ಹಾಗೂ ಅಂತಿಮ ವರ್ಷದ ಅಂಕಪಟ್ಟಿಯ ಪ್ರತಿಯನ್ನು ಲಗತ್ತಿಸಬೇಕು. ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಲ್ಲಿ ಅದರ ವಿವರವನ್ನು ನಮೂದಿಸಬಹುದು. ಇದು ಐಚ್ಛಿಕವಾಗಿದ್ದು, ಈ ಜಾಗವನ್ನು ಖಾಲಿ ಬಿಡಬಹುದು. ಮತದಾರರ ಗುರುತಿನ ಪತ್ರ, ಆಧಾರ್ ಕಾರ್ಡ್ ಅವಶ್ಯಕತೆ ಇಲ್ಲ. ಅಧಿಕಾರಿಗಳು ಖುದ್ದು ನಿಮ್ಮ ನಿವಾಸಕ್ಕೆ ಭೇಟಿ ನೀಡಿ ನಿಮ್ಮ ವಿಳಾಸ ಸರಿಯಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಖುದ್ದು ಪರಿಶೀಲಿಸಲಿದ್ದಾರೆ. ಪದವಿ ಪಡೆದಿರುವುದನ್ನು ಖಚಿತಪಡಿಸಲು ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಗೆಜೆಟೆಡ್ ಅಧಿಕಾರಿಗಳಿಂದ ಸಹಿ ಪಡೆದ ಪತ್ರ ಲಗತ್ತಿಸಬೇಕು.
ನಿಮ್ಮ ಜೊತೆ ಸಂವಹನ ನಡೆಸುವ ಸಲುವಾಗಿ ಮೊಬೈಲ್ ನಂಬರ್, ಇ-ಮೇಲ್ ಐಡಿಯನ್ನು ಬರೆಯಬೇಕು.
ಹೆಚ್ಚಿನ ಮಾಹಿತಿಗಾಗಿ ಗೋ.ಮಧುಸೂದನ ಮಾಜಿ ವಿಧಾನಪರಿಷತ್ ಸದಸ್ಯರು,ನಂ.195,ಅಹೋಬಲ ಮಠ, ಬನುಮಯ್ಯ ಚೌಕದ ಹತ್ತಿರ, ರಾಮವಿಲಾಸ ರಸ್ತೆ, ಮೈಸೂರು 24, ಇಲ್ಲಿ ಅಥವಾ ಮೊಬೈಲ್ ಸಂಖ್ಯೆ 9901399399,9449838208,9900888875 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Leave a Reply

comments

Related Articles

error: