ಮೈಸೂರು

ಮೇ 7 ರಂದು ಮ್ಯಾರಥಾನ್ : ಸೈನಿಕರಿಗಾಗಿ ಸೈನಿಕರೊಂದಿಗೆ ಓಟ

ಮೈಸೂರು, ಮೇ 4:ಹುತಾತ್ಮ ಯೋಧರ ಹಾಗೂ ಸೈನಿಕರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಮೈಸೂರ್ ರನ್ನರ್ಸ್ ವತಿಯಿಂದ ‘ಸೈನಿಕರಿಗಾಗಿ ಸೈನಿಕರೊಂದಿಗೆ ಓಟ’ ಎನ್ನುವ ವಿಶೇಷ ಮ್ಯಾರಥಾನ್ ನ್ನು ಹಮ್ಮಿಕೊಳ್ಳಲಾಗಿದ್ದು, ಮೇ 7 ರಂದು ಬೆಳಿಗ್ಗೆ 5 ಗಂಟೆಗೆ ಮಾನಸಗಂಗೋತ್ರಿಯ ಕ್ಲಾಕ್ ಟವರ್ ಬಳಿಯ ಕುಕ್ಕರಹಳ್ಳಿ ಗೇಟ್ ಬಳಿ ಚಾಲನೆ ನೀಡಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಅಜಿತ್ ತಿಳಿಸಿದರು.

ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಮ್ಯಾರಥಾನ್ ನಲ್ಲಿ ಮುಂಬೈನ ಲೆಫ್ಟಿನೆಂಟ್ ಕರ್ನಲ್ ಸುಂದರೇಶನ್ ಪಾಲ್ಗೊಂಡು ಸುಮಾರು 42.2 ಕಿ.ಮೀ. ಕ್ರಮಿಸುವರು. ಕರ್ನಲ್ ಸುಂದರೇಶನ್ ಅವರು ಸೈನಿಕ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಕಳೆದ 50 ವಾರಗಳಿಂದ ನಿರಂತರವಾಗಿ ಮ್ಯಾರಥಾನ್ ನಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂದಾಯವಾದ ದೇಣಿಗೆಯನ್ನು ಯೋಧರ ಕುಟುಂಬಗಳಿಗೆ ನೀಡಲಾಗುವುದು ಎಂದು ತಿಳಿಸಿದರು.

ಹಣ ಸಂದಾಯ ಮಾಡುವವರು  ಗ್ಲೋಬಲ್ ಫೌಂಡೇಷನ್  ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆ ಸಂಖ್ಯೆ 50100093467860, ಶುಭಂ ಫ್ಯಾಲೇಸ್  ಕೋಪರ್ ಖೈರಾನ್, ಸ್ವೀಫ್ಟ್ ಕೋಡ್ HDFCINBB,  ಬ್ರಾಂಚ್ ಕೋಡ್ 1577, IFSC code HDFC0001575 ಖಾತೆಗೆ ಇಚ್ಚಾನುಸಾರ ಧನ ಸಹಾಯ ಮಾಡಬಹುದು ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ವಿಜಯ್  ಹಾಜರಿದ್ದರು.(ಕೆ.ಎಂ.ಆರ್.ಎಲ್.ಜಿ)

Leave a Reply

comments

Related Articles

error: