ಮೈಸೂರು

ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ

ಮೈಸೂರು,ಅ.16:- ಸಾಲಬಾಧೆ ತಾಳಲಾರದೇ ರೈತರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮುತ್ತುರಾಯನ ಹೊಸಹಳ್ಳಿಯಲ್ಲಿ   ನಡೆದಿದೆ.

ಮೃತ ರೈತನನ್ನು ರವಿಗೌಡ(44) ಎಂದು ಗುರುತಿಸಲಾಗಿದೆ.  ರವಿಗೌಡ ಸುಮಾರು 15 ಲಕ್ಷ ರೂಗಳನ್ನು ಸಾಲ ಮಾಡಿದ್ದರು. ಆದರೆ 2 ವರ್ಷದಿಂದ ಬೆಳೆ ಕೈಗೆ ಸಿಗದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೇ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರವಿಗೌಡ ಅವರು ತಮ್ಮ 7 ಎಕರೆ ಜಮೀನಿನಲ್ಲಿ ತಂಬಾಕು ಹಾಗೂ ಶುಂಠಿ ಬೆಳೆ ಬೆಳೆದಿದ್ದರು. ಕಂಪ್ಲಾಪುರ ಕಾವೇರಿ ಗ್ರಾಮೀಣಾಭಿವೃದ್ಧಿ ಬ್ಯಾಂಕಿನಲ್ಲಿ 6 ಲಕ್ಷ, ಫೈನಾನ್ಸ್​ ಒಂದರಲ್ಲಿ 9 ಲಕ್ಷ ಟ್ರ್ಯಾಕ್ಟರ್ ಸಾಲ ಪಡೆದಿದ್ದರು. ಎರಡು ವರ್ಷದಿಂದ ಬೆಳೆ ಕೈಕೊಟ್ಟು, ಬೆಲೆ ಪಾತಾಳಕ್ಕಿಳಿದಿದ್ದರಿಂದ ರವಿ ಕಂಗಾಲಾಗಿದ್ದರು. ಸಕಾಲದಲ್ಲಿ ಮಳೆಯೂ ಇಲ್ಲದೆ ತಂಬಾಕು ಬೆಳೆ ಸಾಧಾರಣವಾಗಿತ್ತು. ಇದರಿಂದ ನೊಂದು ರವಿ ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: