ಮೈಸೂರು

ಮುರಿದಿದೆ ಜಯಚಾಮರಾಜ ಒಡೆಯರ್ ಪ್ರತಿಮೆಯಲ್ಲಿದ್ದ ಖಡ್ಗ

ಮೈಸೂರು,ಅ.16:-  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ ಅರಮನೆ ಆವರಣದಕ್ಕಷ್ಟೇ ಸೀಮಿತವಾಗಿ ಜಂಬೂ ಸವಾರಿ ಮೆರವಣಿಗೆ ನಡೆಯಿತು. ಅರಮನೆ ಆವರಣಕ್ಕಷ್ಟೇ ಜಂಬೂಸವಾರಿ ಸೀಮಿತವಾಗಿದ್ದರೂ ಕೂಡ ಅರಮನೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.  ನಗರದ ಜಯಚಾಮರಾಜ‌ ಒಡೆಯರ್ ಪ್ರತಿಮೆಗೆ ಹಾನಿಯಾಗಿದೆ.

ಸಾಂಸ್ಕೃತಿಕ ನಗರಿಯಲ್ಲಿ ನಿನ್ನೆ ಜಂಬೂ ಸವಾರಿಯ ವೇಳೆ ಅವಘಡವೊಂದು ಸಂಭವಿಸಿದ್ದು ಜಯಚಾಮರಾಜ ಒಡೆಯರ್ ಪ್ರತಿಮೆಗೆ ಹಾನಿಯಾದ ಘಟನೆ ನಡೆದಿದೆ.

ನಗರದ ಜಯಚಾಮರಾಜ ಒಡೆಯರ್ ಸರ್ಕಲ್ ನಲ್ಲಿರುವ ಜಯಚಾಮರಾಜ ಒಡೆಯರ್ ಅವರ ಅಮೃತ ಶಿಲೆಯಲ್ಲಿ ನಿರ್ಮಾಣವಾಗಿರುವ ಪ್ರತಿಮೆಯ ಖಡ್ಗ ಭಗ್ನಗೊಂಡಿದೆ. ಜಂಬೂ ಸವಾರಿ ವೀಕ್ಷಣೆಗೆ ಕಿಕ್ಕಿರಿದು  ಜನಸ್ತೋಮ ತುಂಬಿದ್ದು, ಜನಸ್ತೋಮ ನಿಯಂತ್ರಿಸಲು ಪೋಲಿಸರು, ಸಿಬ್ಬಂದಿ ಹರಸಾಹಸ ಪಟ್ಟಿದ್ದರು. ಇದೇ ವೇಳೆ ಪ್ರತಿಮೆ ಬಳಿ ಸಾಕಷ್ಟು ಜನ ಸೇರಿದ್ದರಿಂದ ಜಯಚಾಮರಾಜ ಒಡೆಯರ್ ಅವರ ಖಡ್ಗ ಮುರಿದು ಬಿದ್ದಿದೆ ಎನ್ನಲಾಗಿದೆ.

ದಸರಾ ಸಡಗರದ ಹಿನ್ನೆಲೆಯಲ್ಲಿ ಪ್ರತಿಮೆಗೆ ಲೈಟಿಂಗ್, ಹೂವಿನ ಕುಂಡಗಳಿಂದ ಸಿಂಗಾರಗೊಳಿಸಲಾಗಿತ್ತು. ಜಂಬೂ ಸವಾರಿಯನ್ನು ವೀಕ್ಷಿಸಲು ಸಾಗರೋಪಾದಿಯಲ್ಲಿ ಆಗಮಿಸಿದ ಜನ ಪ್ರತಿಮೆಯ ಸುತ್ತಮುತ್ತ ಕಿಕ್ಕಿರಿದು ಜಮಾಯಿಸಿದ್ದರು.ಈ ವೇಳೆ ಹೂಕುಂಡಗಳನ್ನು ತುಳಿದು ಹಾನಿ ಮಾಡಿದ್ದಾರೆ ಎನ್ನಲಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: