ದೇಶಪ್ರಮುಖ ಸುದ್ದಿ

ರಾಯ್ಪುರ ರೈಲ್ವೇ ನಿಲ್ದಾಣದಲ್ಲಿ ಸ್ಫೋಟ : ಸಿಆರ್​ಪಿಎಫ್​​ನ 6 ಯೋಧರಿಗೆ ಗಾಯ

ದೇಶ(ರಾಯ್ಪುರ),ಅ.16:-  ಇಂದು ಛತ್ತೀಸ್ ​ಗಡ್​​ ನ ರಾಯ್ಪುರ ರೈಲ್ವೇ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಸಿಆರ್​ಪಿಎಫ್​​ನ 6 ಯೋಧರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

 ರೈಲ್ವೆ ನಿಲ್ದಾಣದಲ್ಲಿ ಇದ್ದ ಸಿಆರ್​ಪಿಎಫ್​ ವಿಶೇಷ ರೈಲಿನಲ್ಲಿ, ಇಗ್ನಿಟರ್​ ಸೆಟ್​​ ಇರುವ ಪೆಟ್ಟಿಗೆಯೊಂದು ಕೆಳಗೆ ಬಿದ್ದ ನಂತರ ಈ ಸ್ಫೋಟವುಂಟಾಗಿದೆ ಎಂದು ರಾಯ್ಪುರ ಪೊಲೀಸ್​ ಹೇಳಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ರೈಲು ಪ್ಲಾಟ್ ​ಫಾರ್ಮ್​ ನಂಬರ್​ 2ರಲ್ಲಿ ನಿಂತಿತ್ತು, ಮುಂಜಾನೆ 6.30ರ ಹೊತ್ತಲ್ಲಿ ಈ ಇಗ್ನಿಟೆರ್​ ಸೆಟ್​​ ಗಳಿರುವ ಪೆಟ್ಟಿಗೆಯನ್ನು ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಅದು ಕೆಳಗೆ ನೆಲದ ಮೇಲೆ ಬಿದ್ದಿರುವುದಾಗಿ ವರದಿಯಾಗಿದೆ.  ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡಲೇ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭದ್ರತಾ ಸಿಬ್ಬಂದಿ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: