ಮೈಸೂರು

ಮೃಗಾಲಯಕ್ಕೆ  ಎಪ್ಪತ್ತೈದು ಸಾವಿರ ಮಂದಿ ಭೇಟಿ : 77.63ಲಕ್ಷರೂ.ಸಂಗ್ರಹ

ಮೈಸೂರು,ಅ.16:- ಮೈಸೂರು ಜಯಚಾಮರಾಜೇಂದ್ರ ಮೃಗಾಲಯಕ್ಕೆ  ಎಪ್ಪತ್ತೈದು ಸಾವಿರ ಮಂದಿ ಭೇಟಿ ನೀಡಿದ್ದಾರೆ.

ಟಿಕೇಟ್ ಶುಲ್ಕದ ರೂಪದಲ್ಲಿ 77.63ಲಕ್ಷರೂ.ಸಂಗ್ರಹವಾಗಿದೆ. ಕೋವಿಡ್ ಆತಂಕದ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಿರುವುದು ವಿಶೇಷವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭೇಟಿ ನೀಡಿದವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. 2020ರಲ್ಲಿ ದಸರಾ ವೇಳೆ 20ಸಾವಿರ ಮಂದಿ ಮಾತ್ರ ಭೇಟಿ ಕೊಟ್ಟಿದ್ದರು. ಆಯುಧ ಪೂಜೆಯ ದಿನ 9,033ಮಂದಿ ಹಾಗೂ ವಿಜಯ ದಶಮಿಯ ದಿನ 27,093ಮಂದಿ ಭೇಟಿ ನೀಡಿದ್ದಾರೆ. ಈ ದಿನಗಳಲ್ಲಿ ಕ್ರಮವಾಗಿ 9.29ಲಕ್ಷರೂ. 26.67ಲಕ್ಷರೂ. ಮೊತ್ತ ಸಂಗ್ರಹವಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಇದರಿಂದ ಮೃಗಾಲಯದ ಆದಾಯಕ್ಕೂ ಕುತ್ತು ಉಂಟಾಗಿತ್ತು. ಮೃಗಾಲಯದ ನಿರ್ವಹಣೆಗೆ ದಾನಿಗಳ ಮೊರೆ ಹೋಗಲಾಗಿತ್ತು. ಪ್ರಾಣಿಗಳನ್ನು ಹೆಚ್ಚೆಚ್ಚು ದತ್ತು ಪಡೆಯುವಂತೆ ಪ್ರಾಣಿಪ್ರಿಯರಿಗೆ ಮನವಿಯನ್ನೂ ಮಾಡಲಾಗಿತ್ತು. ದಸರಾ ಅವಧಿಯಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದಾರೆ. ಮೃಗಾಲಯದ ನಿಯಮಗಳನ್ನು ಪಾಲಿಸುವುದರ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಿದ ಪ್ರವಾಸಿಗರು ಮತ್ತು ಪೊಲೀಸರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2018ರಲ್ಲಿ 1.53ಲಕ್ಷ ಭೇಟಿ ನೀಡಿದ್ದು, 1.05ಕೋಟಿ ಸಂಗ್ರಹವಾಗಿದೆ. 2019ರಲ್ಲಿ 1.65ಲಕ್ಷ ಮಂದಿ ಭೇಟಿ ಕೊಟ್ಟಿದ್ದು, 1.59ಕೋಟಿ ರೂ.ಸಂಗ್ರಹವಾಗಿದೆ. 2020ರಲ್ಲಿ 20ಸಾವಿರ ಭೇಟಿ ನೀಡಿದ್ದು 19.56ಲಕ್ಷ ಸಂಗ್ರಹವಾಗಿದೆ. 2021ರಲ್ಲಿ 75ಸಾವಿರ ಭೇಟಿ ನೀಡಿದ್ದು 77.63ಲಕ್ಷರೂ.ಸಂಗ್ರಹವಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: